ಮಾ.11: ಕಲ್ಲಪಳ್ಳಿ ಪ್ರೀತಿ ಕಲಾ ಮತ್ತು ಕ್ರೀಡಾ ಸಂಘದ ವತಿಯಿಂದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ

0

ಕಲ್ಲಪಳ್ಳಿ ಪ್ರೀತಿ ಕಲಾ ಮತ್ತು ಕ್ರೀಡಾ ಸಂಘದ ಆಶ್ರಯದಲ್ಲಿ ದಿ|ಮೋನಪ್ಪ ಗೌಡ ನೆಡ್ಚಿಲು ಮೂಲೆಹಿತ್ಲು ರವರ ಸ್ಮರಣಾರ್ಥ ಹೊನಲು ಬೆಳಕಿನ ಪುರುಷರ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟವು ಮಾ.11 ರಂದು ಪ್ರೀತಿ ಮೈದಾನ ಕಲ್ಲಪಳ್ಳಿಯಲ್ಲಿ ನಡೆಯಲಿರುವುದು. ಪಂದ್ಯಾಟದಲ್ಲಿ ವಿಜೇತ ತಂಡಕ್ಕೆ ಪ್ರಥಮ ಬಹುಮಾನ ರೂ, 20001/- ಮತ್ತು ಶಾಶ್ವತ ಫಲಕ, ದ್ವಿತೀಯ ರೂ, 15001/- ಮತ್ತು ಶಾಶ್ವತ ಫಲಕ, ಸೆಮಿಫೈನಲ್ ನಿರ್ಗಮಿಸುವ ತಂಡಗಳಿಗೆ ರೂ,5001/- ಮತ್ತು ಶಾಶ್ವತ ಫಲಕ ನೀಡಲಾಗುವುದು. ಪಂದ್ಯದಲ್ಲಿ ಭಾಗವಹಿಸುವ ತಂಡಗಳು ಪ್ರವೇಶ ಶುಲ್ಕ 500/- ಪಾವತಿಸಿ ಸಂಜೆ 6.00 ಗಂಟೆಗೆ ಹಾಜರಿರಬೇಕಾಗಿ ಸಂಘಟಕರು ತಿಳಿಸಿದ್ದಾರೆ.