ಮಾ.19,20 : ಕಳಂಜ ಶ್ರೀ ಮಹಾವಿಷ್ಣುಮೂರ್ತಿ ಒತ್ತೆಕೋಲ

0

ಶ್ರೀ ವಿಷ್ಣುಮೂರ್ತಿ ಸೇವಾ ಟ್ರಸ್ಟ್ ಕಳಂಜ ವತಿಯಿಂದ ಕಳಂಜ ಶ್ರೀ ಮಹಾವಿಷ್ಣುಮೂರ್ತಿ ಒತ್ತೆಕೋಲವು ಮಾ.19 ಮತ್ತು ಮಾ.20ರಂದು ನಡೆಯಲಿದೆ.
ಮಾ.19 ರಂದು ಸಂಜೆ ಗಂಟೆ 6.00 ಕ್ಕೆ ಸ್ಥಾನದಿಂದ ಭಂಡಾರ ತೆಗೆಯುವುದು.
ರಾತ್ರಿ ಗಂಟೆ 7.30 ಕ್ಕೆ ಮೇಲೇರಿಗೆ ಅಗ್ನಿ ಸ್ಪರ್ಶ ಗಂಟೆ 9.00 ಕ್ಕೆ ಅನ್ನಸಂತರ್ಪಣೆ ರಾತ್ರಿ ಗಂಟೆ 11.00 ಕ್ಕೆ ಕುಳಿಚಟ್ಟು ನಡೆಯಲಿದೆ.
ಮಾ.20 ರಂದು ಪ್ರಾತ:ಕಾಲ ಗಂಟೆ 5.00 ಕ್ಕೆ ದೈವದ ಅಗ್ನಿಪ್ರವೇಶ ಬೆಳಿಗ್ಗೆ ಗಂಟೆ 6.00 ಕ್ಕೆ ಮಾರಿಕಳ 7.00 ಕ್ಕೆ ಪ್ರಸಾದ ವಿತರಣೆ ನಡೆಯಲಿದೆ.
9.00 ಕ್ಕೆ ಗುಳಿಗ ದೈವದ ನೇಮ ನಡೆಯಲಿದೆ.

ಮಾ.19 ರಂದು ರಾತ್ರಿ ಗಂಟೆ 8.30 ರಿಂದ ಸ್ಥಳೀಯ ಪ್ರತಿಭೆಗಳಿಂದ ಮನೋರಂಜನೆ ಕಾರ್ಯಕ್ರಮ ನಡೆಯಲಿದೆ.
ರಾತ್ರಿ ಗಂಟೆ 1.00 ರಿಂದ ನಾಳ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಬೆಳ್ತಂಗಡಿ ಇವರಿಂದ ತುಳು ಯಕ್ಷಗಾನ ” ಉಳ್ಳಾಲ್ತಿನ ಕಾರ್ಣಿಕ” ನಡೆಯಲಿದೆ.