ಕಳಂಜ: ಅಲ್ ಫಲಾಹ್ ಯೂತ್ ಕ್ಲಬ್ ಪದಾಧಿಕಾರಿಗಳ ಆಯ್ಕೆ ಅಧ್ಯಕ್ಷರಾಗಿ ಹನೀಫ್, ಪ್ರ. ಕಾರ್ಯದರ್ಶಿಯಾಗಿ ಅಝೀಝ್

0

ಅಲ್ ಫಲಾಹ್ ಕಳಂಜ ಇದರ 2023-24 ರ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಗೌರವಾಧ್ಯಕ್ಷರಾಗಿ ಮೊಯ್ದೀನ್ ಎ.ಬಿ, ಸಂಘಟನಾ ಅಧ್ಯಕ್ಷರಾಗಿ ಹನೀಫ್ ಯು.ಕೆ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಅಝೀಝ್ ಕೆ.ಹೆಚ್ ಆಯ್ಕೆಯಾಗಿದ್ದಾರೆ. ಕೋಶಾಧಿಕಾರಿಯಾಗಿ ಅಜಪಿಲ ಮಹಮ್ಮದ್, ಉಪಾಧ್ಯಕ್ಷರಾಗಿ ಜಲೀಲ್ ಉಸ್ತಾದ್, ಜೊತೆ ಕಾರ್ಯದರ್ಶಿಯಾಗಿ ನಾಸಿರ್ ಎನ್ ಮತ್ತು ಹನೀಫ್ ಪಿ.ಹೆಚ್ ಆಯ್ಕೆಗೊಂಡರೆ, ಸಂಘಟನಾ ಸದಸ್ಯರುಗಳಾಗಿ ಅಬೂಬಕ್ಕರ್ ಎನ್, ಇಸ್ಮಾಯಿಲ್ ಎನ್, ಇಸ್ಮಾಯಿಲ್ ಮಣಿಮಜಲು, ಫಾರೂಕ್ ಮಣಿಮಜಲು ಮತ್ತು ಅಬ್ದುಲ್ಲ ಪೆರುವಾಜೆಯವರು ಆಯ್ಕೆಯಾದರು. ಇದೇ ರೀತಿ ಗಲ್ಫ್ ಪ್ರತಿನಿಧಿಗಳಾಗಿ ಮತ್ತು ಬೆಂಗಳೂರು ಪ್ರತಿನಿಧಿಗಳಾಗಿ ಕೆಲವು ಮಂದಿಯನ್ನು ಪ್ರಮುಖ ಆಯ್ಕೆಮಾಡಲಾಯಿತು. ಸಂಘಟನಾ ಕಾರ್ಯದರ್ಶಿಯಾಗಿ ಅಬ್ದುಲ್ ನಾಸಿರ್ ಕೆ ನೇಮಕಗೊಂಡರು.