ಕು. ಪ್ರತೀತ ಪಿ. ಭರತ ನಾಟ್ಯ ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ

0

ಕಳಂಜ ಗ್ರಾಮದ ಪಂಜಿಗಾರು ಕು.ಪ್ರತೀತ ಪಿ ಯವರು 2022-23ನೇ ಸಾಲಿನ ಭರತನಾಟ್ಯ ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ. ಇವರು
ವಿಶ್ವಕಲಾನಿಕೇತನ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್ & ಕಲ್ಚರ್ ಪುತ್ತೂರು ಇದರ ಗುರುಗಳಾದ ಕರ್ನಾಟಕ ಕಲಾಶ್ರೀ ವಿದುಷಿ ನಯನ ಪಿ. ರೈ ಮತ್ತು ವಿದುಷಿ ಸ್ವಸ್ತಿಕಾ ಆರ್. ಶೆಟ್ಟಿಯವರ ಶಿಷ್ಯೆ
ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ 9 ನೇ ತರಗತಿ ವಿದ್ಯಾರ್ಥಿನಿ. ಕಳಂಜ ಗ್ರಾಮದ
ಪಂಜಿಗಾರು ಶಾರದಾ ನಿಲಯ, ಸುದ್ದಿ ಬಿಡುಗಡೆ ಪತ್ರಿಕೆ ಏಜೆಂಟ್ ಪ್ರಭಾಕರ ಮತ್ತು ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ
ಶ್ರೀಮತಿ ಜಯಶೀಲಾ ದಂಪತಿಗಳ ಪುತ್ರಿ.