ಜಾನಕಿ ಕಾಪುತಡ್ಕ ನಿಧನ

0

ಮುರುಳ್ಯ ಗ್ರಾಮದ ಕಾಪುತಡ್ಕ ದಿ. ಹುಕ್ರರವರ ಪತ್ನಿ ಜಾನಕಿಯವರು ಎ.10 ರಂದು ನಿಧನರಾದರು. ಅವರಿಗೆ 48 ವರ್ಷ ವಯಸ್ಸಾಗಿತ್ತು.


ಜಾನಕಿಯವರು ತನ್ನ ಮನೆಯ ಪಕ್ಕದಲ್ಲಿ ನಿನ್ನೆ ಕುಸಿದು ಬಿದ್ದರೆನ್ನಾಲಾಗಿದೆ. ತಕ್ಷಣ ಅವರನ್ನು ಬೆಳ್ಳಾರೆ ಆಸ್ಪತ್ರೆಗೆ ಕರೆದೊಯ್ದು ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಗೆ ಸುಳ್ಯಕ್ಕೆ ಕರೆದೊಯ್ಯುವಷ್ಟರಲ್ಲಿ ಅವರು ನಿಧನ ಹೊಂದಿದರೆಂದು ತಿಳಿದುಬಂದಿದೆ.


ಮೃತರು ಪುತ್ರ ರೋಹಿತ್ ಹಾಗೂ ಮೂವರು ಸಹೋದರರು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.