ಸುಬ್ರಹ್ಮಣ್ಯ : ಓಂ ಶ್ರೀ ಸಂಜೀವಿನಿ ಗ್ರಾ. ಪಂ. ಮಟ್ಟದ ಒಕ್ಕೂಟದ ಮಾಸಿಕ ಸಭೆ

0

ಓಂ ಶ್ರೀ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಸುಬ್ರಹ್ಮಣ್ಯ ಇದರ ಮಾಸಿಕ ಸಭೆ ಒಕ್ಕೂಟ ಅಧ್ಯಕ್ಷರಾದ ಸುಜಾತ ರವರ ಅಧ್ಯಕ್ಷತೆ ಯಲ್ಲಿ ಪಂಚಾಯತ್ ನ ಸಭಾಂಗಣ ದಲ್ಲಿ ಎ.13 ರಂದು ನಡೆಯಿತು.ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಕಾಶ್ , ತಾಲೂಕು ಬ್ಲಾಕ್ ಮೆನೇಜರ್ ನಳಿನಿ , ಕಡಬ ತಾಲೂಕು BREP-EP ದೀಪ, ಒಕ್ಕೂಟದ ಕಾರ್ಯದರ್ಶಿ ಮೀನಾಕ್ಷಿ, ಒಕ್ಕೂಟ ದ ಪದಾಧಿಕಾರಿಗಳು, ಕೃಷಿ ಸಖಿ, ಪಶುಸಖಿ, ಬಿಸಿಸಖಿ, ಕೃಷಿ ಉದ್ಯೋಗ ಸಖಿ ಎಮ ಬಿ ಕೆ, ಎಲ್ ಸಿ ಆರ್ ಪಿ ಉಪಸ್ಥಿತರಿದ್ದರು.

ಘನ ತ್ಯಾಜ್ಯ ಘಟಕದ ನಿರ್ವಹಣೆ ಯನ್ನು ಸಂಜೀವಿನಿ ಯೊಂದಿಗೆ ಒಪ್ಪಂದ ಮಾಡಿಕೊಳ್ಳುವ ಕುರಿತು, ಸಂತೆ ಮಾರುಕಟ್ಟೆ ಯಲ್ಲಿ ಸಂಜೀವಿನಿ ಸದಸ್ಯರು ತಯಾರಿಸಿದ ಉತ್ಪನ್ನ ಗಳನ್ನು ಮಾರಾಟ ಮಾಡಲು ವ್ಯಾಪಾರ ಮಳಿಗೆಯ ಬಗ್ಗೆ ಚರ್ಚಿಸಲಾಯಿತು. ಕಾರ್ಯಕ್ರಮದಲ್ಲಿ ಸ್ತ್ರಿ ಸಾಮರ್ಥ್ಯ ಯೋಜನೆಯ ಬಗ್ಗೆ ಆಧಾರ್ ಸಿಡಿಂಗ್ ಕುರಿತು ಮಾಹಿತಿ ನೀಡಿದರು. ಸ್ವ ಉದ್ಯೋಗ ಮಾಡುವ ಒಕ್ಕೂಟ ದ ಅಧ್ಯಕ್ಷ ರ ಮನೆಗೆ ಭೇಟಿ ನೀಡಲಾಯಿತು.ಕಾರ್ಯದರ್ಶಿ ಮೀನಾಕ್ಷಿ ವರದಿ ವಾಚಿಸಿದರು .