ನೆಲ್ಲೂರು ಕೆಮ್ರಾಜೆ : ಬೊಳ್ಳಾಜೆ ಮತಗಟ್ಟೆಯಲ್ಲಿ ನಿಧಾನ ಮತದಾನ

0

ಮಧ್ಯಾಹ್ನದಿಂದಲೇ ಸರತಿ ಸಾಲು

ಸಂಜೆ ವೇಳೆ ಕೈಕೊಟ್ಟ ವಿದ್ಯುತ್-ಕತ್ತಲೆಯಾದ ಮತಗಟ್ಟೆ

ನೆಲ್ಲೂರು ಕೆಮ್ರಾಜೆ ಗ್ರಾಮದ ಬೊಳ್ಳಾಜೆ ಮತಗಟ್ಟೆಯಲ್ಲಿ ನಿಧಾನವಾಗಿ ಮತದಾನ ನಡೆಯುವ ಕಾರಣ ಮತದಾರರು ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ಕಾಯುವಂತಾಗಿದೆ.

ಇವಿಎಂ ಮೆಷಿನ್ ಕೂಡಾ ನಿಧಾನವಾಗಿ ಕೆಲಸ ಮಾಡುತ್ತಿರುವುದೇ ಮತದಾನ ನಿಧಾನವಾಗಲು ಕಾರಣ ಎಂದು ತಿಳಿದು ಬಂದಿದೆ. ಮಧ್ಯಾಹ್ನದ ಸಮಯ ಕಾದು ಮತದಾನ ಮಾಡದೇ ಹೋದ ಮತದಾರರು ಸಂಜೆ ವೇಳೆ ಮತ್ತೆ ಬಂದ ಕಾರಣ ಸರತಿ ಸಾಲು ಉದ್ದವಾಗತೊಡಗಿದ್ದು, ಮತದಾರರಿಗೆ ಸಮಸ್ಯೆಯಾಗಿದೆ.