ವಳಲಂಬೆ: ಕಾಂಗ್ರೆಸ್ ಬ್ಯಾನರ್‌ಗೆ ಕಿಡಿಗೇಡಿಗಳಿಂದ ಬೆಂಕಿ

0

ವಳಲಂಬೆಯಲ್ಲಿ ಹಾಕಲಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಸಿ.ಎಂ ಡಿ.ಕೆ. ಶಿವಕುಮಾರ್ ಅವರಿಗೆ ಅಭಿನಂದಿಸಿ ಹಾಕಿದ್ದ ಬ್ಯಾನರ್ ಗೆ ಕಿಡಿಗೇಡಿಗಳು ಬೆಂಕಿ ಇಟ್ಟಿರುವುದು ವರದಿಯಾಗಿದೆ.

ನಿನ್ನೆ ಸಂಜೆಯಷ್ಟೆ ವಳಲಂಬೆ ಯ ಬಸ್ ನಿಲ್ದಾಣದ ಸಮೀಪ ಪೈಕ್ ಕ್ರಾಸ್ ಬಳಿ ಬ್ಯಾನರ್ ಅಳವಡಿಸಲಾಗಿತ್ತು. ರಾತ್ರಿ ಅದಕ್ಕೆ ಬೆಂಕಿ ಹಚ್ಚಲಾಗಿದ್ದು ಬ್ಯಾನರ್ ಬಹುತೇಕ ಸುಟ್ಟುಹೋಗಿದೆ. ಈ ಬಗ್ಗೆ ಕಾಂಗ್ರೆಸ್ ಗ್ರಾಮ ಸಮಿತಿ ಗುತ್ತಿಗಾರು ವತಿಯಿಂದ ವಳಲಂಬೆ ಶ್ರೀ ಶಂಖಪಾಲ ದೇವಸ್ಥಾನದಲ್ಲಿ, ಸ್ಥಳೀಯ ದೇವಸ್ಥಾನದಲ್ಲಿ ಹರಕೆ ಹೇಳಲಾಗುವುದು ಎಂದು ಸಮಿತಿಯವರು ತಿಳಿಸಿದ್ದಾರೆ.