ಕುಕ್ಕೆ ಸುಬ್ರಹ್ಮಣ್ಯ ದೇವಳದ ಸಿಬ್ಬಂದಿಗೆ ಸಂಬಳ ಕೊಡುತ್ತಿಲ್ಲ, ದಲಿತ ನಿಂದನೆ ಮಾಡಿದ್ದಾರೆಂಬ ಆರೋಪ

0

ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಮೇಲೆ ದೂರು ದಾಖಲು

ಕುಕ್ಕೆ ಶ್ರೀ ಸುಬ್ರಮಣ್ಯ ದೇವಾಲಯದ ನೌಕರರೊಬ್ಬರು ತನಗೆ ಸರಿಯಾಗಿ ಸಂಬಳ ನೀಡುತ್ತಿಲ್ಲ ಜಾತಿ ನಿಂದನೆ ಮಾಡುತ್ತಾರೆ ಎಂದು ಆರೋಪಿಸಿ ದೇವಸ್ಥಾನದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಹಾಗೂ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಮೇಲೆ ಸುಬ್ರಹ್ಮಣ್ಯ ಪೋಲೀಸರಿಗೆ ದೂರು‌ನೀಡಿದ ಘಟನೆ ವರದಿಯಾಗಿದೆ.

ದೇವಳದ ಸಿಬ್ಬಂದಿ ಪ್ರವೀಣ್ ಕುಮಾರ್ ಎಂಬವರು ದೂರು ನೀಡಿದ್ದಾರೆ. ‌ಎರಡು ಪುಟದಲ್ಲಿ ತನಗಾಗಿರುವ ಅನ್ಯಾಯದ ಕುರಿತು ಅವರು‌ ಬರೆದುಕೊಂಡಿದ್ದಾರೆ.

ಕಳೆದ 15 ವರ್ಷದಿಂದ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಗುಮಾಸ್ತನಾಗಿ ದುಡಿಯುತ್ತಿರುವ ಪ್ರವೀಣ್ ಕುಮಾರ್ ಎಂಬ ಯುವಕ ಮತ್ತು ರಾಜೇಶ್ ರೈ ಎಂಬವರ ಮೇಲೆ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಪುಷ್ಪಲತಾ ಎಂಬವರು ಸಹಿ ಪೋರ್ಜರಿ ಮಾಡಿರುವುದಾಗಿ ಅರೋಪಿಸಿ 2021 ರಲ್ಲಿ ಕೆಲಸದಿಂದ ಅಮಾನತು ಮಾಡಲಾಗಿತ್ತು. 11 ತಿಂಗಳ ಬಳಿಕ ಮತ್ತೆ ಕೆಲಸಕ್ಕೆ ಸೇರಲು ಅನುಮತಿ ನೀಡಿದ್ದು ಈಗ ಸರಿಯಾಗಿ ಸಂಬಳ ಪಾವತಿಮಾಡುವುದಿಲ್ಲ ಹಾಗೂ ಕೆಲಸ ಖಾಯಂ ಮಾಡುತಿಲ್ಲ ಎಂದು ಅರೋಪ ಕೇಳಿಬಂದಿದೆ. ಇದಕ್ಕೆಲ್ಲ ನೇರ ಹೊಣೆ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಪುಷ್ಪಲತಾ ಹಾಗೂ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಎಂದು ಆರೋಪಿಸಲಾಗಿದೆ.

ಪ್ರವೀಣ್ ಕುಮಾರ್ ಹಾಗೂ ರಾಜೇಶ್ ರೈ ತನ್ನ ಸಹಿಯನ್ನು ಪೋರ್ಜರಿ ಮಾಡಿದ್ದಾರೆಂದು ಆರೋಪಿಸಿ ಎರಡು ವರ್ಷಗಳ ‌ಹಿಂದೆ ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಪುಷ್ಪಲತಾರವರು ಆಡಳಿತ ಮಂಡಳಿಗೆ ದೂರು ನೀಡಿದರು. ಈ ಪ್ರಕರಣವನ್ನು ಆಡಳಿತ ಮಂಡಳಿಯವರು ಹಿಂದೂ ಧಾರ್ಮಿಕ ಇಲಾಖೆಯ ಆಯುಕ್ತರಿಗೆ ವಹಿಸಿತ್ತು.
ಕಾನೂನು ಪ್ರಕಾರ ತನಿಖೆ ನಡೆಸಿದ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರು ಇದೊಂದು ಸುಳ್ಳು ಅಪವಾದ ಪ್ರವೀಣ್ ಕುಮಾರ್ ಮತ್ತು ರಾಜೇಶ್ ರೈ ನಿರಪರಾಧಿ ಎಂದು ಸಾಬೀತು ಪಡಿಸಿ ವರದಿಯನ್ನು ಸಲ್ಲಿಸಿದರು.

ಆದರೆ ಇಲ್ಲಿನ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಪುಷ್ಪಲತಾ ಹಾಗೂ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಪ್ರವೀಣ್ ಕುಮಾರ್‌ಗೆ ದಲಿತ ವ್ಯಕ್ತಿಯೆಂದು ಜಾತಿನಿಂದನೆ ಮಾಡುತ್ತಾ ತೇಜೋವಧೆ ಮಾಡುತ್ತಿದ್ದಾರೆ ಎಂದು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.