ದಿ.ನವೀನ್ ರೈ ಮೇನಾಲರಿಗೆ ಹುಟ್ಟೂರಿನಲ್ಲಿ ಸಾರ್ವಜನಿಕ ಶ್ರದ್ಧಾಂಜಲಿ

0

ನವೀನಣ್ಣರಿಗೆ ಅವರೇ ಸಾಟಿ.‌ ಅವರ ಜತೆ ಯಾರನ್ನೂ‌ ಹೋಲಿಸಲು ಸಾಧ್ಯವಿಲ್ಲ. ತಾನು ನಡೆದ ಎಲ್ಲ ಕ್ಷೇತ್ರದಲ್ಲಿ ಪ್ರಾಮಾಣಿಕ, ಸ್ವಾಭಿಮಾನಿಯಾಗಿ ಸೇವೆ ಸಲ್ಲಿಸಿದವರು. ತಾನು ವಹಿಸಿಕೊಂಡ ಜವಾಬ್ದಾರಿಯನ್ನು ಅತ್ಯಂತ ನಿಷ್ಠೆ ಯಿಂದ ಮಾಡುತ್ತಿದ್ದರು. ಅವರ ನಡೆ ನುಡಿ ಎಲ್ಲರಿಗೂ ಮಾದರಿ ಎಂದು ದಿ.ನವೀನ್ ರೈಯವರ ಆಪ್ತ ವಲಯ‌ ನುಡಿನಮನ ಸಲ್ಲಿಸಿದೆ.

ಮೇ.18 ರಂದು‌ ನಿಧನರಾದ ಬಿಜೆಪಿ‌ ಧುರೀಣ, ಜಿ.ಪಂ. ಮಾಜಿ ಸದಸ್ಯ ನವೀನ್ ರೈ ಮೇನಾಲರಿಗೆ ಹುಟ್ಟೂರಿನಲ್ಲಿ ನಡೆದ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯಲ್ಲಿ ನುಡಿನಮನ ಸಲ್ಲಿಸಲಾಯಿತು. ಮೇನಾಲದ ಭಜನಾ ಮಂದಿರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಜಿ.ಜಿ.ನಾಯಕ್, ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಸದಸ್ಯ ಸುರೇಶ್ ಕಣೆಮರಡ್ಕ, ದಯಾಳನ್ ಮೇದಿನಡ್ಕ, ರಾಮಚಂದ್ರ ಪಲ್ಲತಡ್ಕ, ಪ್ರೊ.ಜವರೇಗೌಡ, ಶ್ರೀಧರ ಮೇನಾಲ ನುಡಿನಮನ ಸಲ್ಲಿಸಿದರು.

ಮೇನಾಲ ಕಾಳಿಕ ದುರ್ಗಾಪರಮೇಶ್ವರಿ ‌ಕ್ಷೇತ್ರದ ಪದ್ಮಸ್ವಾಮಿ, ಅಜ್ಜಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಸತ್ಯವತಿ ಬಸವನಪಾದೆ ಸಹಿತ, ಊರಿನ‌ ಗಣ್ಯರು, ಅಭಿಮಾನಿಗಳು, ಊರವರು ಇದ್ದರು. ಭಾಗವಹಿಸಿದವರೆಲ್ಲರೂ ನವೀನ್ ರೈಗಳ ಭಾವಚಿತ್ರ ಕ್ಕೆ ಪುಷ್ಪನಮನ ಸಲ್ಲಿಸಿ, ಮೌನ ಪ್ರಾರ್ಥನೆ ಮಾಡಿಕೊಂಡರು.

ಬಾಲಕೃಷ್ಣ ‌ಮೇನಾಲ ಕಾರ್ಯಕ್ರಮ ನಿರೂಪಿಸಿದರು.