ಆರ್ ಕೆ ನಾಯರ್ ಗೆ ರೋಟರಿ ವನ ಸಿರಿ ಪ್ರಶಸ್ತಿ ಪ್ರದಾನ

0

ಪರಿಸರದ ಪ್ರತಿಯೊಂದು ಜೀವಿಗೂ ಪ್ರಾಮುಖ್ಯತೆಯನ್ನು ನೀಡುವ ಜವಾಬ್ದಾರಿ ಮಾನವನಿಗೆ ಇದ್ದರೆ ಮಾತ್ರ ಪರಿಸರ ಸಂರಕ್ಷಣೆ ಮಾಡಬಹುದು. ಇದರ ಸೂಕ್ಷ್ಮತೆಯನ್ನು ಅರಿತು ಪ್ರತಿಯೊಬ್ಬರೂ ಪರಿಸರ ಸ್ನೇಹಿಯಾಗಿ ಬದುಕಬೇಕು ಎಂದು ಗ್ರೀನ್ ಹೀರೋ ಆಫ್ ಇಂಡಿಯಾ ಆರ್ ಕೆ ನಾಯರ್ ಇವರು ಕಾಡುಗಳು ಹಾಗೂ ಪರಿಸರ ಪ್ರಜ್ಞೆ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು ಹಾಗೂ ಪ್ರತಿ ರೋಟರಿ ಸದಸ್ಯರು ಪರಿಸರ ಸಂರಕ್ಷಣೆ ಬಗ್ಗೆ ಕಾಳಜಿ ವಹಿಸಬೇಕೆಂದು ಕರೆ ನೀಡಿದರು.

ರೋಟರಿ ಕ್ಲಬ್ ಸುಳ್ಯ ಇಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಆರ್ ಕೆ ನಾಯರ್ ಅವರಿಗೆ ರೋಟರಿ ವನಸಿರಿ ಪ್ರಶಸ್ತಿ ನೀಡಿ ರಾಮಚಂದ್ರ ಪಿ ಹಾಗೂ ಸಹಕಾರಿ ರತ್ನ ಸವಣೂರ್ ಸೀತಾರಾಮ ರೈ ಅವರು ಗೌರವಿಸಿದರು. ವೇದಿಕೆಯಲ್ಲಿ ಪೂರ್ವಾಧ್ಯಕ್ಷ ಪ್ರಭಾಕರ ನಾಯರ್, ನಿಯೋಜಿತ ಅಧ್ಯಕ್ಷ ಆನಂದ ಖಂಡಿಗ ಉಪಸ್ಥಿತರಿದ್ದರು.

ರೋಟರಿ ಅಧ್ಯಕ್ಷ ಚಂದ್ರಶೇಖರ್ ಪೇರಾಲ್ ಎಲ್ಲರನ್ನೂ ಸ್ವಾಗತಿಸಿ ರೋಟರಿ ಕಾರ್ಯದರ್ಶಿ ಮಧುರಾ ಎಂ ಆರ್. ವಂದಿಸಿದರು. ಈ ಸಂದರ್ಭದಲ್ಲಿ ಆರ್ ಕೆ ನಾಯರ್ ಇವರು ರೋಟರಿ ಪ್ರಮುಖ ಯೋಜನೆಗೆ ದೇಣಿಗೆಯನ್ನು ನೀಡಿ ಸಹಕರಿಸಿದರು.