ನೆಲ್ಲೂರು ಕೆಮ್ರಾಜೆ ಪ್ರಾಥಮಿಕ‌ ಕೃಷಿ ಪತ್ತಿನ ಸಹಕಾರಿ‌ ಸಂಘದ ಸಿಬ್ಬಂದಿ ಚನಿಯಪ್ಪ ನಾಯ್ಕರವರಿಗೆ ಬೀಳ್ಕೊಡುಗೆ ಸಮಾರಂಭ

0

ನೆಲ್ಲೂರು ಕೆಮ್ರಾಜೆ ಪ್ರಾಥಮಿಕ‌ ಕೃಷಿ ಪತ್ತಿನ ಸಹಕಾರಿ‌ ಸಂಘದ ಸಿಬ್ಬಂದಿ ಚನಿಯಪ್ಪ ನಾಯ್ಕರವರಿಗೆ ಬೀಳ್ಕೊಡುಗೆ ಸಮಾರಂಭವು ಸಂಘದ ಪ್ರಧಾನ‌ಕಚೇರಿಯ ಮೊಳಹಳ್ಳಿ ಶಿವರಾವ್ ಸಭಾಭವನದಲ್ಲಿ‌ ಇಂದು ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ವಿಷ್ಣು ಭಟ್ ವಹಿಸಿದ್ದರು.

ಪ್ರಸ್ತಾವಿಕವಾಗಿ ಹರೀಶ್ ಕಂಜಿಪಿಲಿಯವರು ಮಾತನಾಡಿದರು.

ಮಾಜಿ ಅಧ್ಯಕ್ಷ ಮತ್ತು ಹಾಲಿ ಸದಸ್ಯ ಉಮೇಶ್ ಪ್ರಭು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂತೋಷ್ ಎನ್., ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗನ್ನಾಥ ಉಬರಡ್ಕ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ನಿವೃತ್ತ ಸಿಬ್ಬಂದಿ ಚನಿಯಪ್ಪ ನಾಯ್ಕ ಚೆನ್ನಡ್ಕರವರನ್ನು ಆಡಳಿತ ಮಂಡಳಿ ವತಿಯಿಂದ ಶಾಲು ಹೊದಿಸಿ, ಮಾಲಾರ್ಪಣೆ ಮಾಡಿ, ಪೇಟ ತೊಡಿಸಿ, ಚಿನ್ನದ ಉಂಗುರ ಇಟ್ಟು ಗೌರವಪೂರ್ವಕವಾಗಿ ಬೀಳ್ಕೊಡಲಾಯಿತು. ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗನ್ನಾಥ ಶೆಟ್ಟಿ ಉಬರಡ್ಕ ಮತ್ತು ವಾಣಿ ಜೆ ಶೆಟ್ಟಿ ದಂಪತಿಗಳು ಚಿನ್ನದ ಉಂಗುರು ತೊಡಿಸಿದರಲ್ಲದೆ, ಸಿಬ್ಬಂದಿಗಳು, ಅವರ ಹಿತೈಷಿಗಳು ನೆನಪಿನ‌ಕಾಣಿಕೆ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಸೊಸೈಟಿಯ ನಿರ್ದೇಶಕರಾದ ಶುಭಾಕರ ನಾಯಕ್ ಬೊಳ್ಳಾಜೆ, ಮಾಧವ ಸುಳ್ಳಿ, ದೇವಿಪ್ರಸಾದ್ ಸುಳ್ಳಿ, ಹರೀಶ್ ಸುಳ್ಳಿ, ಶ್ರೀಮತಿ ಇಂದಿರಾ ಎರ್ಮೆಟ್ಟಿ, ಸತ್ಯೇಶ್ ಚಂದ್ರೋಡಿ, ಶ್ರೀಮತಿ ಸಂಧ್ಯಾ ಪುನ್ಕುಟ್ಟಿ ಹಾಗೂ ಪ್ರಮುಖರಾದ ಹೇಮನಾಥ ಕೋಡ್ತುಗುಳಿ, ರಾಘವೇಂದ್ರ ಕಂದೂರು, ಹರೀಶ್ ಮಂಚಿ, ದೇವಪ್ಪ ನಾಯಕ್ ಕೊರತ್ತೋಡಿ, ಶಶಿಧರ ಸುಳ್ಳಿ, ವೇಣುಗೋಪಾಲ ಮಂದ್ರಪ್ಪಾಡಿ, ರಾಮಚಂದ್ರ ಪ್ರಭು, ನವೋದಯ ಪ್ರೇರಕಿ ಶ್ರೀಮತಿ ದೇವಕಿ, ಉಬರಡ್ಕ ಮಿತ್ತೂರು ಸೊಸೈಟಿ ಯ ನಿವೃತ್ತ ಕಾರ್ಯನಿರ್ವಾಹಣಾಧಿಕಾರಿ ರಾಘವ ರಾವ್, ನೆಲ್ಲೂರು ಕೆಮ್ರಾಜೆ ಗ್ರಾ.ಪಂ. ಮಾಜಿ ಅಧ್ಯಕ್ಷ ದಿವಾಕರ ನಾಯಕ್ ಎರ್ಮೆಟ್ಟಿ, ಕಾನೂನು ಸಲಹೆಗಾರ ದಿವಾಕರ ಸುಳ್ಳಿ, ಹಾಗೂ ಪ್ರಮುಖರಾದ ಚಂದ್ರಶೇಖರ ನಾಯಕ್ ಸುಳ್ಳಿ, ಉದಯರವಿ ಕಲ್ಚಾರ್, ಎಸ್.ಎನ್.ಪದ್ಮನಾಭ, ಲಿಂಗಪ್ಪ ಮಾಸ್ತರ್ ಹರ್ಲಡ್ಕ, ವಸಂತ ಕುಮಾರ್ ನಾರ್ಣಕಜೆ, ಶರತ್ ಚಂದ್ರ ಎರ್ಮೆಟ್ಟಿ, ಲಲಿತಾ ಪೂಜಾರಿ, ಉಮಾವತಿ, ಸುಮಂಗಲಾ ಸುಭಾಶ್, ಸೌಮ್ಯ ಚಂದ್ರಶೇಖರ ಜಬಳೆ, ಬಾಲಕೃಷ್ಣ ನಾಯಕ್ ಕೆರೆಮೂಲೆ, ಗೌರಿ ಗಣೇಶ್ ಕೆರೆಮೂಲೆ, ಪ್ರಭಾಕರ ಸುಳ್ಳಿ, ನಾರಾಯಣ ಮುಂಡೋಮೂಲೆ, ಮುರಳೀಧರ ಪುನ್ಕುಟ್ಟಿ, ಬಾಲಕೃಷ್ಣ ಗೌಡ ಸುಳ್ಳಿ, ಶ್ರೀಕಾಂತ್ ಬಾಳೆಗುಡ್ಡೆ, ಜಿಲ್ಲಾ ಪ್ರತಿನಿಧಿ ಮನೋಜ್ ಕುಮಾರ್ ಮತ್ತಿತರರು ಉಪಸ್ಥಿತದ್ದರು.

ಜೀವನ್ ಪುನ್ಕುಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳಾದ ಶುಭಾಶ್ಚಂದ್ರ‌ ನಾಯಕ್ ಕೆರೆಮೂಲೆ, ಪ್ರಶಾಂತ್ ದಾಸನಕಜೆ ಸಹಕರಿಸಿದರು. ಶ್ರೀಮತಿ ಲತಾ ವಂದಿಸಿದರು.