ರೋಟರಿ ಆಂಗ್ಲ ಮಾಧ್ಯಮ ನರ್ಸರಿ ಶಾಲೆ ಯ ಪ್ರಾರಂಭೋತ್ಸವ

0

ಸುಳ್ಯ ರೋಟರಿ ಆಂಗ್ಲ ಮಾಧ್ಯಮ ನರ್ಸರಿ ಶಾಲೆಯ ಪ್ರಾರಂಭೋತ್ಸವ ಜೂ.1 ರಂದು ನಡೆಯಿತು.
ಈ ಕಾರ್ಯಕ್ರಮವನ್ನು ರೋಟರಿ ವಿದ್ಯಾಸಂಸ್ಥೆಯ ಸಂಚಾಲಕರಾದ ರೋ. ಗಿರಿಜಾ ಶಂಕರ ತುದಿಯಡ್ಕ ರವರು ಉದ್ಘಾಟಿಸಿ ಶುಭ ಹಾರೈಸಿದರು. ಶಾಲಾ ಮುಖ್ಯ ಶಿಕ್ಷಕರಾದ ಶ್ರೀಮತಿ ವೀಣಾ ಶೇಡಿಕಜೆಯವರು ಕಾರ್ಯಕ್ರಮ ನಿರ್ವಹಿಸಿದರು.ಶ್ರೀಮತಿ ಹರಿಣಾಕ್ಷಿ ಕೆ ಎಸ್, ನರ್ಸರಿ ಶಿಕ್ಷಕರು, ಮತ್ತಿತರ ಶಿಕ್ಷಕರು, ಪೋಷಕರು,ಮಕ್ಕಳು ಭಾಗವಹಿಸಿದರು. ಹುಟ್ಟುಹಬ್ಬ ಆಚರಿಸಿ ಕೊಳ್ಳುವ ಮಕ್ಕಳನ್ನು ವೇದಿಕೆಗೆ ಕರೆಸಿ ಶುಭ ಹಾರೈಸಿದರು. ಭಾಗವಹಿಸಿದ ಎಲ್ಲರಿಗೂ ಸಿಹಿ ತಿಂಡಿ ವಿತರಿಸಲಾಯಿತು.