ಅಮರ ಸುಳ್ಯ ರಮಣೀಯ ಸುಳ್ಯ ತಂಡದ ಸಿ.ಎಚ್. ಪ್ರಭಾಕರ್ ನಾಯರ್ ಅವರಿಗೆ ರೋಟರಿ ಕ್ಲಬ್ ಗೌರವಾರ್ಪಣೆ

0

ಸ್ವಚ್ಛತಾ ಕಾರ್ಯದ ಮೂಲಕ ಸಮಾಜ ಸೇವೆ ನಡೆಸುತ್ತಿರುವ ಸುಳ್ಯದ ಉದ್ಯಮಿ ಸಿ.ಎಚ್.ಪ್ರಭಾಕರನ್ ನಾಯರ್ ಅವರನ್ನು ಸುಳ್ಯ ರೋಟರಿ ಕ್ಲಬ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

‘ಅಮರ ಸುಳ್ಯ ರಮಣೀಯ ಸುಳ್ಯ ತಂಡ’ ದ ಜೊತೆ ನಿರಂತರ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಪ್ರಭಾಕರನ್ ನಾಯರ್ ಪ್ರತಿ ದಿನ ಕುರುಂಜಿಭಾಗ್‌ನ ತನ್ನ ಅಂಗಡಿ ಸುತ್ತಮುತ್ತ ರಸ್ತೆ ಬದಿಯಲ್ಲಿ ಸ್ವಚ್ಚತಾ ಕಾರ್ಯ‌ ಕೈಗೊಳ್ಳುತ್ತಿದ್ದಾರೆ. ರೋಟರಿ ಕ್ಲಬ್ ಸದಸ್ಯರಾದ ನಾಯರ್ ಅವರನ್ನು ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ಪೇರಾಲು ಗೌರವಿಸಿದರು.