ಎಸ್.ಡಿ.ಎಂ.ಸಿ. ವಿವಾದದಿಂದ ಬೇರೆ ಶಾಲೆಗೆ ನಮ್ಮ ಮಕ್ಕಳನ್ನು ಸೇರಿಸಿದ್ದಲ್ಲ: ಮಿತ್ತಡ್ಕ ಶಾಲೆಯ ಪೋಷಕರಿಂದ ಪ್ರತಿಕ್ರಿಯೆ

0

ಮಿತ್ತಡ್ಕ ಶಾಲೆಯಿಂದ 17 ವಿದ್ಯಾರ್ಥಿಗಳನ್ನು ಮುಡ್ನೂರು ಮರ್ಕಂಜ ಹಿ.ಪ್ರಾ. ಶಾಲೆಗೆ ಸೇರ್ಪಡೆಗೊಳಿಸಿದ ವಿಚಾರವಾಗಿ ಮಾಧ್ಯಮದಲ್ಲಿ‌ ಬಂದ ವರದಿಗೆ ಪ್ರತಿಕ್ರಿಯಿಸಿರುವ ಮಿತ್ತಡ್ಕ ಶಾಲೆಯಲ್ಲಿ ಎಸ್ ಡಿಎಂಸಿ ಅಧ್ಯಕ್ಷೆಯಾಗಿದ್ದ ಸಂಧ್ಯಾ ದೋಳ ಮತ್ತು ಪೋಷಕ ಪ್ರತಿನಿಧಿಯಾಗಿದ್ದ ಜಗನ್ನಾಥ ಜಯನಗರರವರು, ನಾವು ಎಸ್ ಡಿಎಂಸಿ ವಿವಾದದ ಹಿನ್ನೆಲೆಯಲ್ಲಿ ಮಿತ್ತಡ್ಕ ಶಾಲೆಯಿಂದ ಮಕ್ಕಳನ್ನು ತೆಗೆದಿರುವುದು ಅಲ್ಲ. ಶಾಲಾ ಮುಖ್ಯೋಪಾಧ್ಯಾಯರು ಮತ್ತು ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಯಲ್ಲಿ ಕಾನೂನು ಉಲ್ಲಂಘನೆ ಮಾಡಿ ಸಭೆ ನಡೆಸಿರುವುದಕ್ಕೆ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸಿದ್ದೇವೆ ಎಂದು ತಿಳಿಸಿದ್ದಾರೆ.