ಸುಳ್ಯ ಸ.ಮಾಹಿ.ಪ್ರಾ.ಶಾಲಾ ಪ್ರಾರಂಭೋತ್ಸವ

0ಸುಳ್ಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು. ನೂತನವಾಗಿ ಸೇರ್ಪಡೆಗೊಂಡ ಮಕ್ಕಳನ್ನು ಹೂ ನೀಡಿ ಸ್ವಾಗತಿಸಲಾಯಿತು. ಸಭಾಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ.ಅಧ್ಯಕ್ಷ ರಮೇಶ್ ವಹಿಸಿದ್ದರು.


ಎಸ್‌ಡಿಎಂಸಿ ಉಪಾಧ್ಯಕ್ಷೆ ಜಯಶೀಲಾ ಶುಭ ಹಾರೈಸಿದರು. ಸರಕಾರ ನೀಡಿದ ಉಚಿತ ಪಠ್ಯ ಪುಸ್ತಕ ಹಾಗೂ ಶಾಲಾ ಸಮವಸ್ತ್ರವನ್ನು ವಿತರಿಸಲಾಯಿತು. ಶಿಕ್ಷಕಿಯರುಗಳಾದ ಹೇಮಲತಾ , ಶೀಲಾವತಿ , ಪ್ರೇಮಾವತಿ ಮತ್ತು ನೂತನ ಅತಿಥಿ ಶಿಕ್ಷಕಿ ಮಲ್ಲಿಕಾ ಉಪಸ್ಥಿತರಿದ್ದರು.