ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಕಲಿಕಾ ಕೌಶಲ್ಯ ತರಬೇತಿ

0

ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ ಇಲ್ಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಒಂದು ದಿನದ ಕಲಿಕಾ ಕೌಶಲ್ಯ ಗಳ ತರಬೇತಿ ಕಾರ್ಯಗಾರ ಜೂ.3 ರಂದು ನಡೆಯಿತು. ಕಾರ್ಯಗಾರದ ಉದ್ಘಾಟನೆಯನ್ನು ಕೆಎಸ್ಎಸ್ ಕಾಲೇಜ್ ನ ನಿವೃತ್ತ ಪ್ರಾಂಶುಪಾಲರಾದ ರಂಗಯ್ಯ ಶೆಟ್ಟಿಗಾರ್ ನೆರವೇರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾರ್ಥಿನಿ ಕುl ತಪಸ್ಯ ನಾಯಕ್ ವಹಿಸಿದ್ದರು. ವೇದಿಕೆಯಲ್ಲಿ ಶಾಲಾ ಅಧ್ಯಕ್ಷರಾದ ಗಣೇಶ್ ಪ್ರಸಾದ್, ಸಂಚಾಲಕರಾದ ಚಂದ್ರಶೇಖರ್ ನಾಯರ್, ಸುಬ್ರಹ್ಮಣ್ಯ ಐನೆಕಿದು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಜಯಪ್ರಕಾಶ್ ಕೂಜುಗೋಡು, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವಿದ್ಯಾರತ್ನ ಉಪಸ್ಥಿತರಿದ್ದರು. ಕಾರ್ಯಗಾರವನ್ನು ರಾಜ್ಯ ತರಬೇತುದಾರ ಸಿ.ಸಿ ಪಾವಟೆ ನಡೆಸಿಕೊಟ್ಟರು.