ಸಂಪಾಜೆ: ಕಡೆಪಾಲದಲ್ಲಿ ಅಗಲೀಕರಣಗೊಂಡು ಡಾಮರೀಕರಣಗೊಳ್ಳುತ್ತಿರುವ ರಾಷ್ಟ್ರೀಯ ಹೆದ್ದಾರಿ

0

ವಾಹನ ಅಪಘಾತಗಳಿಗೆ ಇನ್ನಾದರೂ ಬೀಳಬೇಕಿದೆ ಬ್ರೇಕ್

ಸಂಪಾಜೆ ಗ್ರಾಮದ ಕಡೆಪಾಲ ಎಂಬಲ್ಲಿ ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯು ಅಗಲೀಕರಣಗೊಂಡಿದ್ದು, ಡಾಮರೀಕರಣ ಕಾಮಗಾರಿ ಪ್ರಗತಿಯಲ್ಲಿದೆ. ಇಲ್ಲಿ ಕಳೆದ ಹಲವು ಬಾರಿ ಸರಣಿ ವಾಹನ ಅಪಘಾತಗಳು ಸಂಭವಿಸಿದ್ದು, ಇದೀಗ ರಸ್ತೆ ಅಗಲೀಕರಣಗೊಂಡಿದ್ದು, ಇನ್ನಾದರೂ ವಾಹನ ಅಪಘಾತಗಳಿಗೆ ಬ್ರೇಕ್ ಬೀಳಬೇಕಿದೆ.

ಕಡೆಪಾಲ ಎಂಬಲ್ಲಿ ಉದ್ದನೆಯ ರಸ್ತೆ ಇದ್ದು ಕಿರು ಸೇತುವೆ ಸಮೀಪ ರಸ್ತೆ ಕಿರಿದಾಗಿದ್ದು, ಅಲ್ಲಿ ಅತೀ ವೇಗವಾಗಿ ಬರುತ್ತಿದ್ದ ವಾಹನಗಳ ಮಧ್ಯೆ ಹಿಂಬದಿಯಿಂದ ಢಿಕ್ಕಿ ಸಂಭವಿಸುತ್ತಿತ್ತು.
ಈ ನಿಟ್ಟಿನಲ್ಲಿ ಇದೀಗ ಕಿರು ಸೇತುವೆ ಸೇರಿದಂತೆ ಅಲ್ಲಿ ರಸ್ತೆಯನ್ನು ಅಗಲೀಕರಣಗೊಳಿಸಲಾಗಿದೆ.