ಜೂ.4: ಜಾಲ್ಸೂರು ಮೆಸ್ಕಾಂ ಉಪವಿಭಾಗದ ವತಿಯಿಂದ ಮರದ ಗೆಲ್ಲು ತೆರವು ಕಾರ್ಯ

0

ಜಾಲ್ಸೂರು ಮೆಸ್ಕಾಂ ಉಪವಿಭಾಗದ ವತಿಯಿಂದ ಕನಕಮಜಲು ಗ್ರಾಮ ವ್ಯಾಪ್ತಿಯಲ್ಲಿ ವಿದ್ಯುತ್ ಲೈನಿಗೆ ತಾಗುವ ಮರದ ಗೆಲ್ಲುಗಳ ತೆರವು ಕಾರ್ಯವು ಕನಕಮಜಲು ಯುವಕ ಮಂಡಲದ ಸಹಕಾರದೊಂದಿಗೆ ಶ್ರಮದಾನದ ಮೂಲಕ ಜೂ.4ರಂದು ನಡೆಯಲಿದೆ.

ಆದ್ದರಿಂದ ಕನಕಮಜಲು ಗ್ರಾಮದ ಎಲ್ಲಾ ವಿದ್ಯುತ್ ಬಳಕೆದಾರರು ಬೆಳಗ್ಗಿನಿಂದ ಸಂಜೆಯವರೆಗೆ ತಮ್ಮ ವ್ಯಾಪ್ತಿಯಲ್ಲಿ ವಿದ್ಯುತ್ ಲೈನಿಗೆ ತಾಗಿಕೊಂಡಿರುವ ಮರದ ಗೆಲ್ಲುಗಳನ್ನು ತೆರವುಗೊಳಿಸುವುದರ ಮೂಲಕ ಮೆಸ್ಕಾಂ ಇಲಾಖೆಯ ಸಿಬ್ಬಂದಿಗಳೊಂದಿಗೆ ಸಹಕರಿಸಬೇಕಾಗಿದೆ.