ಬಾಳಿಲ ವಿದ್ಯಾಬೋಧೀನೀ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

0

ಬಾಳಿಲ ವಿದ್ಯಾ ಬೋಧಿನಿ ಪ್ರೌಢಶಾಲೆಯಲ್ಲಿ ಜೂ. 5ರಂದು ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ವಿದ್ಯಾ ಬೋಧಿನೀ ಪ್ರೌಡ ಶಾಲೆಯ ಸಂಚಾಲಕರಾದ ಪಿ.ಜಿ.ಎಸ್.ಎನ್ ಪ್ರಸಾದ್ ವಿಶ್ವ ಪರಿಸರ ದಿನಾಚರಣೆಯ ಸಂದೇಶ ನೀಡಿದರು. ಮುಖ್ಯ ಗುರುಗಳಾದ ಯಶೋಧರ ಎನ್ ಸ್ವಾಗತಿಸಿದರು.

ಗಣಿತ ಶಿಕ್ಷಕರಾದ ಉದಯಕುಮಾರ್ ಪ್ರಸ್ತಾವನೆಗೈದರು. ಪ್ರದೀಪ್ ಕೆ ಮತ್ತು ಚಿಂತನಾ ಕೆ ಪರಿಸರ ದಿನಾಚರಣೆಯ ಮಹತ್ವ ತಿಳಿಸಿದರು. ವಿದ್ಯಾರ್ಥಿನಿಯರಾದ ಸಿಂಚನ ಮತ್ತು ಸೃಷ್ಟಿ ಆರಂಭ ಗೀತೆ ಹಾಡಿದರು. ವಿದ್ಯಾರ್ಥಿ ಶಿವಕೃಷ್ಣ ಕಾರ್ಯಕ್ರಮ ನಿರೂಪಿಸಿದರು ಚಿಂತನ್ ವಂದಿಸಿದರು.

ಕಾರ್ಯಕ್ರಮದಲ್ಲಿ ವಿಶೇಷವಾಗಿ ವಿದ್ಯಾರ್ಥಿಗಳಿಗೆ ವಿವಿಧ ಸಸ್ಯಗಳ ಬೀಜದುಂಡೆಯನ್ನು ವಿತರಿಸಲಾಯಿತು. ರಾಮನ್ ಇಕೋ ಕ್ಲಬ್ ಮತ್ತು ಸ್ಕೌಟ್ ಗೈಡ್ಸ್ ಸಂಘಗಳು ಕಾರ್ಯಕ್ರಮ ಸಂಘಟಿಸಿವು.