ಅರಂಬೂರು ಅಂಬಿಕ ಮಹಿಳಾ ಮಂಡಲದ ಮಾಸಿಕ ಸಭೆ – ಸನ್ಮಾನ

0

ಅರಂಬೂರು ಅಂಬಿಕಾ ಮಹಿಳಾ ಮಂಡಲದ ಮಾಸಿಕ ಸಭೆಯು ಅಮಿತಾ ರೈ ಯವರ ಅಧ್ಯಕ್ಷತೆಯಲ್ಲಿ ಮೇ.28 ರಂದು ನಡೆಯಿತು.


ಶ್ರೀಮತಿ ಲಕ್ಷ್ಮೀ ಭಟ್ ಪ್ರಾರ್ಥಿಸಿ, ಶ್ರೀಮತಿ ಹಾರಾವತಿ ಸ್ವಾಗತಿಸಿದರು. ರೈತ ಸಂಘ ಹಾಗೂ ಸ್ವಸಹಾಯ ಸಂಘಗಳ ತಿಂಗಳ ಕಂತನ್ನು ಸಂಗ್ರಹಿಸಲಾಗಿತ್ತು .


ನಂತರ 10ನೇ ತರಗತಿಯಲ್ಲಿ 625ರಲ್ಲಿ 622 ಅಂಕ ಪಡೆದು ರಾಜ್ಯಕ್ಕೆ 4ನೇ ಸ್ಥಾನ ಪಡೆದ ಅಂಬಿಕಾ ಮಹಿಳಾ ಮಂಡಲದ ಸದಸ್ಯೆ ಶ್ರೀಮತಿ ಸರೋಜಾ ಮಜಿಗುಂಡಿಯವರ ಮೊಮ್ಮಗಳು ಕುಮಾರಿ ಕೀರ್ತನಾಳನ್ನು ಸನ್ಮಾನಿಸಲಾಯಿತು. ಊರಿಗೆ ಕೀರ್ತಿ ತಂದ ಅವಳನ್ನು ಹೆಮ್ಮೆಯಿಂದ ಮಹಿಳಾ ಮಂಡಲದ ಸದಸ್ಯೆಯರು ಹಾರೈಸಿದರು.