ಕಾಯರ್ತೋಡಿ: ಮೂಲನಾಗದೇವರ ನಾಗನಕಟ್ಟೆ ನಿರ್ಮಾಣಕ್ಕೆ ಭೂಮಿಪೂಜೆ

0

ಸುಳ್ಯ ನಗರದ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ಮೂಲ ನಾಗದೇವರ ನಾಗನಕಟ್ಟೆ ನಿರ್ಮಾಣಕ್ಕೆ ಭೂಮಿಪೂಜೆಯು ಜೂ.9ರಂದು ಬೆಳಿಗ್ಗೆ ಜರುಗಿತು.

ಶ್ರೀ ಮಹಾವಿಷ್ಣು ದೇವಸ್ಥಾನದ ಪ್ರಧಾನ ಅರ್ಚಕ ನೀಲಕಂಠ ಅವರ ನೇತೃತ್ವದಲ್ಲಿ ಭೂಮಿಪೂಜೆ ಜರುಗಿತು.
ಶ್ರೀ ಮಹಾವಿಷ್ಣು ದೇವಾಲಯದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಕೃಷ್ಣ ಕಾಮತ್ ಅರಂಬೂರು, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಿ.ಕೆ. ಉಮೇಶ್ , ಹಾಗೂ ದೇವಾಲಯದ ಆರ್ಥಿಕ ಸಮಿತಿ ಸಂಚಾಲಕ ನಾರಾಯಣ ಕೇಕಡ್ಕ ಅವರು ಭೂಮಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಸದಸ್ಯರುಗಳು, ಬ್ರಹ್ಮಕಲಶೋತ್ಸವ ಸಮಿತಿಯ ಸದಸ್ಯರುಗಳು, ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು.