ಜೂನಿಯರ್ ಕಾಲೇಜು ಸುಳ್ಯದ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶದಲ್ಲಿ ಹೆಚ್ಚಳ

0


ಮರುಮೌಲ್ಯಮಾಪನದ ನಂತರ ಸ.ಪ.ಪೂ.ಕಾ ಸುಳ್ಯ ಇದರ ಜೀವಿತಾ, ಮಹಮ್ಮದ್ ಆಸಿರ್, ಫಾತಿಮಾ ಫಾಹಿಮಾ ಈ ಮೂರು ವಿದ್ಯಾರ್ಥಿಗಳು ಉತ್ತೀರ್ಣರಾಗಿ ಸಂಸ್ಥೆಯ ಫಲಿತಾಂಶ 83.6 % ಕ್ಕೆ ಏರಿದೆ. ಕೃತಸ್ವರದೀಪ್ತ ಇವನು 11 ಅಂಕ ಅಧಿಕವಾಗಿ ಪಡೆದು 604 ಅಂಕಗಳೊಂದಿಗೆ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ಸೌಮ್ಯ ಸುಂದರ ಪಾಟಾಜೆ 15 ಅಂಕ ಅಧಿಕ ಪಡೆದು ಡಿಸ್ಟಿಂಕ್ಷನ್ ಪಡೆದಿದ್ದಾಳೆ. ಇದೇ ರೀತಿ ಮಾನಸ ಎಂ.ಬಿ. 5 ಅಂಕ, ಸಮೀಕ್ಷಾ 14 ಅಂಕ, ಭೂಮಿಕಾ 15 ಅಂಕ, ಪ್ರಿಯದರ್ಶಿನಿ 5 ಅಂಕ, ಸುಮೇಧಾ 1 ಅಂಕ, ತೃಷಾ 1 ಹೆಚ್ಚುವರಿ ಅಂಕ ಪಡೆದಿದ್ದಾರೆ.