ಕಾಂಗ್ರೆಸ್ ಮುಖಂಡರಾದ ನಂದಕುಮಾರ್, ಎಂ.ವೆಂಕಪ್ಪ ಗೌಡ, ಬಾಲಕೃಷ್ಣ ಬಳ್ಳೇರಿಯವರಿಗೆ ಕೆಪಿಸಿಸಿ ಶಿಸ್ತು ಸಮಿತಿಯಿಂದ ಶೋಕಾಸ್ ನೋಟೀಸ್

0

2023ರ ವಿಧಾನಸಭಾ ಚುನಾವಣೆಯ ಸಂದರ್ಭ ಕಾಂಗ್ರೆಸ್ ‌ಅಭ್ಯರ್ಥಿ ಸೋಲಿಗೆ ತಾವು ಕಾರಣರಾಗಿದ್ದೀರಿ ಎಂದು ನಮಗೆ ದೂರು‌ ಬಂದಿರುವುದರಿಂದ ತಾವುಗಳು ಮುಂದಿನ 7 ದಿನಗಳೊಳಗೆ‌ ಉತ್ತರ ನೀಡಬೇಕೆಂದು ಕಾಂಗ್ರೆಸ್ ನಾಯಕರಾದ ನಂದಕುಮಾರ್, ಎಂ.ವೆಂಕಪ್ಪ‌ ಗೌಡ ಹಾಗು ಬಾಲಕೃಷ್ಣ ಬಳ್ಳೇರಿಯವರಿಗೆ ಕೆಪಿಸಿಸಿ ಶಿಸ್ತು ಸಮಿತಿ‌ ಶೋಕಾಸ್ ನೋಟೀಸ್ ನೀಡಿದೆ.

ತಾವುಗಳು ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯ ಪರವಾಗಿ ಬಹಿರಂಗ ಪ್ರಚಾರ‌ ಮಾಡದೆ ಪಕ್ಷದ ವಿರುದ್ದವೇ ಪ್ರಚಾರ ನಡೆಸಿ ಪಕ್ಷದ ಅಭ್ಯರ್ಥಿಯ ಸೋಲಿಗೆ ಕಾರಣರಾಗಿದ್ದೀರಿ ಎಂದು ಕೆಪಿಸಿಸಿಗೆ ಲಿಖಿತ ದೂರು ಬಂದಿದೆ.

ಈ‌ ಬಗ್ಗೆ ತಮ್ಮ ವಿವರಣೆಯನ್ನು ಪತ್ರ ತಲುಪಿದ 7 ದಿವಸಗಳೊಳಗಾಗಿ ಕೆಪಿಸಿಸಿ ಕಚೇರಿಗೆ ಕಳುಹಿಸಿ ಕೊಡುವಂತೆ ಶಿಸ್ತು ಸಮಿತಿಯ ಅಧ್ಯಕ್ಷ ಕೆ.ರೆಹಮಾನ್ ಖಾನ್ ರವರು ಈ ಮೂವರು ನಾಯಕರಿಗೂ ಪ್ರತ್ಯೇಕ ಪ್ರತ್ಯೇಕವಾಗಿ ಕಳುಹಿಸಿದ ನೋಟೀಸ್ ನಲ್ಲಿ ತಿಳಿಸಿದ್ದಾರೆ