ಸುಳ್ಯ ಪೊಲೀಸ್ ಠಾಣಾ ತನಿಖಾ ವಿಭಾಗದ ಎಸ್‌ಐ ರತ್ನಕುಮಾರ್ ಮರಳಿ ಸುಳ್ಯಕ್ಕೆ

0

ಸುಳ್ಯ ಪೊಲೀಸ್ ಠಾಣೆಯಲ್ಲಿ ತನಿಖಾ ವಿಭಾಗದ ಠಾಣಾ ಉಪನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರತ್ನಕುಮಾರ್ ಎಂ ರವರು ಚುನಾವಣಾ ನಿಮಿತ್ತ ಕಳೆದ ನಾಲ್ಕು ತಿಂಗಳ ಮೊದಲು ಚಿಕ್ಕಮಂಗಳೂರು ರೂರಲ್ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದರು.


ಅವರ ಸ್ಥಾನಕ್ಕೆ ಚಿಕ್ಕಮಂಗಳೂರು ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಶಾಹಿದ್ ಆಫ್ರಿದಿ ಸುಳ್ಯ ಠಾಣೆಗೆ ಕರ್ತವ್ಯಕ್ಕೆ ಹಾಜರಾಗಿದ್ದರು.

ಇದೀಗ ಚುನಾವಣೆಯ ಪ್ರಕ್ರಿಯೆಗಳು ಮುಗಿದ ಬಳಿಕ ಅವರವರ ಸ್ಥಾನಗಳಿಗೆ ಅಧಿಕಾರಿಗಳು ಮರಳಿದ್ದು ರತ್ನಕುಮಾರ್ ರವರು ಸುಳ್ಯ ಪೊಲೀಸ್ ಠಾಣೆಗೆ ಮರಳಿ ಕರ್ತವ್ಯಕ್ಕೆ ಬಂದಿರುತ್ತಾರೆ.