ಸೆ.3 ರಂದು ಮಾನಸ ಮಹಿಳಾ ಮಂಡಲ ಪದಗ್ರಹಣ

0


`ಮಾನಸ ಅಮ್ಮ’ ಯೋಜನೆಯಡಿ ಮಗುವಿನ ದತ್ತು ಸ್ವೀಕಾರ

ಸುಳ್ಯ ಜಟ್ಟಿಪಳ್ಳ ಮಾನಸ ಮಹಿಳಾ ಮಂಡಲ ಇದರ ೨೦೨೨-೨೩ನೇ ಸಾಲಿನ ವಾರ್ಷಿಕ ಮಹಾಸಭೆ ಮತ್ತು ಪದಗ್ರಹಣ ಸಮಾರಂಭ ಹಾಗೂ ಮಹಿಳಾ ಅಭಿವೃದ್ಧಿ ಇಲಾಖೆಯಿಂದ ಮಹಿಳೆಯರಿಗೆ ಸಿಗುವ ಯೋಜನೆಗಳ ಮಾಹಿತಿ-ವಿಚಾರ ವಿನಿಮಯ ಮತ್ತು “ಮಾನಸ ಅಮ್ಮ” ಯೋಜನೆಯಡಿ ಮಗುವಿನ ದತ್ತು ಸ್ವೀಕಾರ ಸೆ.೩ರಂದು ಜಟ್ಟಿಪಳ್ಳ ಯುವ ಸದನದಲ್ಲಿ ನಡೆಯಲಿದೆ.


ವಿಶ್ರಾಂತ ಪ್ರಾಂಶುಪಾಲೆ ಡಾ| ರೇವತಿ ನಂದನ್ ಸಮಾರಂಭ ಉದ್ಘಾಟಿಸುವರು. ನ.ಪಂ. ಮಾಜಿ ಉಪಾಧ್ಯಕ್ಷೆ ಸರೋಜಿನಿ ಪೆಲತಡ್ಕ, ಸುಳ್ಯ ಸಿಡಿಪಿಒ ಶೈಲಜಾ ದಿನೇಶ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುವರು. ಮಾನಸ ಮಹಿಳಾ ಮಂಡಲದ ಅಧ್ಯಕ್ಷೆ ರೇವತಿ ಗೋಪಾಲ ಅಧ್ಯಕ್ಷತೆ ವಹಿಸಲಿದ್ದಾರೆ.