ಸುಳ್ಯ ನಗರದಲ್ಲಿ ಸೌಜನ್ಯ ಪರ ಹಾಕಲಾಗಿದ್ದ ಬ್ಯಾನರ್ ಗಳ ತೆರವು

0

ನಗರ ಪಂಚಾಯತ್ ಕಾರ್ಯಾಚರಣೆ

ಸುಳ್ಯ ನಗರದ ಅಲ್ಲಲ್ಲಿ ಅಳವಡಿಸಲಾಗಿದ್ದ ನಿನ್ನೆ ರಾತ್ರಿ ಸೌಜನ್ಯ ಪರ ಬ್ಯಾನರ್ ಗಳನ್ನು ಇಂದು ಬೆಳಗ್ಗಿನ ಜಾವ ಸುಳ್ಯ ನಗರ ಪಂಚಾಯತ್ ಅಧಿಕಾರಿಗಳು ತೆರವುಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.

ಬ್ಯಾನರ್ ಅಳವಡಿಸಲು ನ.ಪಂ‌ ಅನುಮತಿ ಪಡೆದುಕೊಂಡಿರಲಿಲ್ಲದ ಕಾರಣ ನ ಪಂ ಅಧಿಕಾರಿಗಳು ತೆರವು ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಸುಳ್ಯದಲ್ಲಿ ಇಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಗಾಂಧಿ ಸ್ಮೃತಿ, ಜನಜಾಗೃತಿ ಜಾಥಾ ಮತ್ತು ಸಮಾವೇಶ ನಡೆಯುತ್ತಿದೆ. ಈ ಮಧ್ಯೆ ನಿನ್ನೆ ರಾತ್ರಿ ನಗರದ ಹಲವೆಡೆ ಸೌಜನ್ಯ ಪರ ಬ್ಯಾನರ್ ಗಳು ಪ್ರತ್ಯಕ್ಷಗೊಂಡಿತ್ತು. ಅನುಮತಿ ಪಡೆಯದೆ ಈ ಬ್ಯಾನರ್ ಹಾಕಲಾಗಿರುವುದರಿಂದ ನ.ಪಂ.ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆಂದು ತಿಳಿದುಬಂದಿದೆ.

.