ಅ.15 ರಿಂದ ಅ.23 ತನಕ : ಪಂಜ ದೇವಳದಲ್ಲಿ ನವರಾತ್ರಿ ಪೂಜೆ

0

ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ
ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಅ.15 ರಿಂದ ಅ.23ರ ತನಕ ನವರಾತ್ರಿ ಉತ್ಸವದ ಅಂಗವಾಗಿ ಪ್ರತಿ ದಿನ ಸಂಜೆ ಗಂಟೆ 7 ರಿಂದ ವಿಶೇಷ ಪೂಜಾದಿಗಳು , ವಿಶೇಷ ಕಲಾಪ್ರಕಾರಗಳ ಸೇವೆಗಳು ಜರುಗಲಿದೆ. ಶ್ರೀ ಅಮ್ಮನವರಿಗೆ ಸೀರೆ ,ಕುಪ್ಪಸ ,ಅರಶಿನ ಶುದ್ಧ ಕುಂಕುಮವನ್ನು ಸಮರ್ಪಿಸಲು ಅವಕಾಶವಿರುತ್ತದೆ.


ಅ.15 ರಂದು ಸುಬ್ರಹ್ಮಣ್ಯ ಭಟ್ ದೇವಸ್ಯ ರವರಿಂದ ಚೆಂಡೆ. ಅ.16 ರಂದು ಎನ್ .ಪಿ ಪವನ್ ಆಚಾರ್ಯರವರಿಂದ ತಬಲಾ.ಅ.17ರಂದು ವೈದಿಕರಿಂದ ವೇದ ಮಂತ್ರ.ಅ.18 ರಂದು ಗೋಪಾಲಕೃಷ್ಣ ದೇವಸ್ಯ, ಸುಭಾಷ್ ಪಂಜ, ರಚನಾ ಚಿದ್ಗಲ್, ಸುಬ್ರಹ್ಮಣ್ಯ ಭಟ್ ದೇವಸ್ಯ , ಲಕ್ಷ್ಮೀಶ ಶಗ್ರಿತ್ತಾಯ , ಗಗನ್ ಪಂಜ ಮತ್ತು ಇತರರಿಂದ ಯಕ್ಷ-ಗಾನ.ಅ.19ರಂದು ಸರಯು ವಿ ಮುಚ್ಚಿಲ, ಶಂಬನಾದ : ಸುಂದರ ದೇವಾಡಿಗ ರವರಿಂದ ಭರತನಾಟ್ಯ .ಅ.20.ರಂದು ರಾಮಚಂದ್ರ ಕಲ್ಮಡ್ಕ ಮತ್ತು ತಂಡದವರಿಂದ ವೇಣುವಾದನ .ಅ.21 ರಂದು ವಸುಧಾ ಬಿ ಮುಚ್ಚಿಲ ,ಸ್ತುತಿ ರೈ ಅಡ್ಠಬೈಲು ರವರಿಂದ ಭರತನಾಟ್ಯ.ಅ.22 ರಂದು ಸುಮಾ ಕೋಟೆ ರವರಿಂದ ಭಕ್ತಿ ಸಂಗೀತ.ಅ.23 ರಂದು ಕೃಷ್ಣ ಭಟ್ ಸಂಪ ರವರಿಂದ ಪುರಾಣ ವಾಚನ ಕಲಾ ಸೇವೆ ನಡೆಯಲಿದೆ. ಎಂದು ದೇವಳದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.