ಮರ್ಕಂಜದ ಡಾ. ಪ್ರಭಾತ್ ಬಲ್ನಾಡು ಪ್ರಾಂಶುಪಾಲರಾಗಿ ಪದೋನ್ನತಿ

0

ಮೂಡುಬಿದಿರೆಯ 52 ವರ್ಷಗಳ ಇತಿಹಾಸವನ್ನು ಹೊಂದಿರುವ ಜೈನ ಪದವಿಪೂರ್ವ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಮರ್ಕಂಜ ಗ್ರಾಮದ ಡಾ. ಪ್ರಭಾತ್ ಬಲ್ನಾಡು ಪೇಟೆಯವರು ಪದೋನ್ನತಿ ಹೊಂದಿದ್ದಾರೆ.

1999 ರಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ಳಾರೆಯಲ್ಲಿ ಉಪನ್ಯಾಸ ವೃತ್ತಿ ಆರಂಭಿಸಿದ ಇವರು ಕಳೆದ 22 ವರ್ಷಗಳಿಂದ ಜೈನ ಪದವಿಪೂರ್ವ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಯಕ್ಷಗಾನ ಕಲಾವಿದರಾಗಿ, ಸಂಘಟಕರಾಗಿ, ಆಕಾಶವಾಣಿ ಹಾಗೂ ಟಿವಿ ಮಾಧ್ಯಮಗಳ ಸಂಪನ್ಮೂಲ ವ್ಯಕ್ತಿಯಾಗಿ, ಇತಿಹಾಸ ಸಂಶೋಧಕರಾಗಿ ಲೇಖಕರಾಗಿ, ಜೆ ಸಿಐ ತರಬೇತುದಾರರಾಗಿ, ಅಧ್ಯಕ್ಷರಾಗಿ, ಹತ್ತಾರು ಸಂಘ ಸಂಸ್ಥೆಗಳ ಪದಾಧಿಕಾರಿಯಾಗಿ ಸಕ್ರಿಯರಾಗಿರುವ ಇವರು ಹಿರಿಯ ಯಕ್ಷಗಾನ ಸಂಘಟಕ ಯುವರಾಜ ಜೈನ್ ಮರ್ಕಂಜ ಮತ್ತು ಶ್ರೀಮತಿ ಪ್ರಸನ್ನ ದಂಪತಿಗಳ ಪುತ್ರ.