ಕಬಡ್ಡಿಯಲ್ಲಿ ರಾಷ್ಟಮಟ್ಟಕ್ಜೆ ಆಯ್ಕೆಯಾದ ಬೆಳ್ಳಾರೆ ಕೆ.ಪಿ.ಎಸ್.ವಿದ್ಯಾರ್ಥಿಗಳಿಗೆ ಅದ್ದೂರಿ ಸ್ವಾಗತ

0

ಶಾಸಕಿ ಭಾಗೀರಥಿ ಮುರುಳ್ಯರವರಿಂದ ವಿದ್ಯಾರ್ಥಿಗಳಿಗೆ ಮಾಲಾರ್ಪಣೆ – ಮೆರವಣಿಗೆಗೆ ಚಾಲನೆ

ಬೆಳ್ಳಾರೆ ಕೆಪಿಎಸ್ ನ ಇಬ್ಬರು ವಿದ್ಯಾರ್ಥಿಗಳು ಕಬಡ್ಡಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದು ಅವರನ್ನು ಇಂದು ಅದ್ದೂರಿಯಾಗಿ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯಿತು.
ಶಾಸಕಿ ಭಾಗೀರಥಿ ಮುರುಳ್ಯರವರು ವಿದ್ಯಾರ್ಥಿಗಳಾದ ಕಿಶನ್ ದ್ರಾವಿಡ್ ಮತ್ತು ಹೇಮಂತ್ ರ ನ್ನು ಶಾಲು ಹೊದಿಸಿ ಮಾಲಾರ್ಪಣೆ ಮಾಡಿ ಬಳಿಕ ಮೆರವಣಿಗೆಗೆ ಚಾಲನೆ ನೀಡಿದರು.

ಬೆಳ್ಳಾರೆ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಹತ್ತಿರದಿಂದ ಹೂವಿನಿಂದ ಅಲಂಕರಿಸಿದ ತೆರದ ವಾಹನದಲ್ಲಿ ಬಸ್ಟೆಂಡ್ ವರೆಗೆ ಮೆರವಣಿಗೆ ನಡೆಯಿತು.
ಬಳಿಕ ಬಸ್ಟೆಂಡ್ ನಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ರವರು ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲೂ ಪ್ರಥಮ ಸ್ಥಾನಿಯಾಗಿ ಮೂಡಿಬರಲಿ ಎಂದು ಹೇಳಿದರು.


ಕಾಲೇಜಿನ ಉಪಪ್ರಾಂಶುಪಾಲೆ ಉಮಾಕುಮಾರಿಯವರು ಶುಭಹಾರೈಸಿ ಮಾತನಾಡಿದರು.
ಕೆ.ಪಿ.ಎಸ್ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಮಾಯಿಲಪ್ಪರವರು ಕಾರ್ಯಕ್ರಮ ನಿರೂಪಿಸಿದರು.
ಬ್ಯಾಂಡ್ ವಾದ್ಯಗಳ ಮೂಲಕ ನಡೆದ
ಮೆರವಣಿಗೆಯಲ್ಲಿ ಶಾಲಾ ಎಸ್.ಡಿ.ಎಂ.ಸಿ.ಕಾರ್ಯಾಧ್ಯಕ್ಷ ಶ್ರೀನಾಥ ರೈ ಬಾಳಿಲ,ಸದಸ್ಯ ಹರ್ಷ ಜೋಗಿಬೆಟ್ಟು,ಶಾಲಾ ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ,ಮಕ್ಕಳ ಪೋಷಕರು , ಗ್ರಾಮ ಪಂಚಾಯತ್ ಸದಸ್ಯರು, ಸಂಘ,ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.