ಪೈಂಬೆಚ್ಚಾಲು ಅಂಗನವಾಡಿ ಕೇಂದ್ರಕ್ಕೆ ಸೀಲಿಂಗ್ ಪ್ಯಾನ್ ಕೊಡುಗೆ

0

ಆಲೆಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೈಂಬೆಚ್ಚಾಲ್ ಅಂಗನವಾಡಿ ಕೇಂದ್ರಕ್ಕೆ ಸ್ಥಳೀಯ ಗ್ರಾ.ಪಂ.ಸದಸ್ಯ, ಯುವ ನ್ಯಾಯವಾದಿ ನೋಟರಿ ಧರ್ಮಪಾಲ ಕೊಯಿಂಗಾಜೆ ಯವರು ಸೀಲಿಂಗ್ ಫ್ಯಾನ್ ಕೊಡುಗೆ ನೀಡಿದರು. ಈ ಸಂದರ್ಭದಲ್ಲಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಜಲಜಾಕ್ಷಿ ಕೊಯಿಂಗಾಜೆ, ಸಹಾಯಕಿ ರೋಹಿಣಿ, ಆಶಾ ಕಾರ್ಯಕರ್ತೆ ಶಾಲಿನಿ ಪರಮಂಡಲ,ಸ್ಥಳೀಯ ರಾದ ಮಹಮ್ಮದ್ ರಫೀಕ್, ರಝಾಕ್ ಪಿ. ಎ, ರಝಾಕ್ಎಂ ಪಿ, ಮೂಸ, ಮಹಮ್ಮದ್ ಷರೀಫ್ , ಅಬ್ದುಲ್ ರಹಿಮಾನ್, ಅಬ್ದುಲ್ ಸಮದ್, ಶಾಲಾ ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.