ನಾಸಾದ ಕಾನ್ಸರೆನ್ಸ್‌ನಲ್ಲಿ ಡಾ.ಆರ್.ಕೆ.ನಾಯ‌ರ್ ಪ್ರಬಂಧ ಮಂಡನೆ

0

ಪರಿಸರ ತಜ್ಞ, ಗ್ರೀನ್‌ ಹೀರೋ ಆಫ್‌ ಇಂಡಿಯಾ ಡಾ.ಆರ್.ಕೆ.ನಾಯರ್ ಅವರಿಗೆ ನಾಸಾದ ವತಿಯಿಂದ ಆಯೋಜಿಸಲಾದ ಕಾನ್ಸರೆನ್ಸ್‌ನಲ್ಲಿ ಭಾಗವಹಿಸಿ ಪ್ರಬಂಧ ಮಂಡಿಸುವ ಅವಕಾಶ ದೊರೆತಿದ್ದು, ಈ ಸಂದರ್ಭ ತುಳು ಭಾಷೆಯ ಕಂಪು ಹರಿಸಿ ವಿಶೇಷತೆ ಮೆರೆದಿದ್ದಾರೆ. ಆನ್‌ಲೈನ್ ಮೂಲಕ ನಾಸಾ ಏರ್ಪಡಿಸಿದ ಕಾನ್ಸರೆನ್ಸ್‌ನಲ್ಲಿ ವಿಶ್ವದ ವಿವಿಧ ಭಾಗಗಳ ವಿಜ್ಞಾನಿಗಳು ಹಾಗೂ ತಜ್ಞರು ಭಾಗವಹಿಸಿ ವಿಚಾರ ಮಂಡಿಸಿದ್ದರು. ಜಾಗತಿಕ ತಾಪಮಾನದ ನಿಯಂತ್ರಣದ ಬಗ್ಗೆ ನಡೆದ ಕಾನ್ಸರೆನ್ಸ್‌ನಲ್ಲಿ ಜಾಗತಿಕ ತಾಪಮಾನ ನಿಯಂತ್ರಣದಲ್ಲಿ ಮಿಯಾವಾಕಿ ಅರಣ್ಯದ ಪಾತ್ರದ ಬಗ್ಗೆ ವಿಚಾರ ವಿನಿಮಯ ನಡೆಯಿತು. ಮಿಯಾವಾಕಿ ಮಾದರಿಯ ಅರಣ್ಯ ಬೆಳೆಸುವುದರಿಂದ ಭೂಮಿಗೆ, ಜೀವರಾಶಿಗಳಿಗೆ ಮತ್ತು ಮುಂದಿನ ಜನಾಂಗಕ್ಕೆ ಆಗುವ ಪ್ರಯೋಜನಗಳ ಕುರಿತು ಡಾ.ಆರ್.ಕೆ.ನಾಯರ್‌ ಮಾತನಾಡಿದರು. ಪ್ರಶ್ನೆಗಳಿಗೆ ಉತ್ತರ ನೀಡಿದರು. ತನ್ನ ವಿಚಾರ ಮಂಡನೆಯ ಕೊನೆಗೆ ಆ‌ರ್.ಕೆ.ನಾಯರ್ ಅವರು ತುಳುವಿನಲ್ಲಿ ನಾಸಾಗೆ ಧನ್ಯವಾದ ಸಮರ್ಪಿಸಿ ವಿಶೇಷತೆ ಮೆರೆದರು.