ಪೆರುವಾಜೆ ದೇವಸ್ಥಾನದಲ್ಲಿ ಜಾತ್ರೋತ್ಸವ ಮತ್ತು ರಥ ಸಮರ್ಪಣೆ ಬಗ್ಗೆ ಸಂಘ ಸಂಸ್ಥೆಗಳ ಪೂರ್ವಭಾವಿ ಸಭೆ

0

ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಜ.15 ರಿಂದ ಜ.21 ರವರೆಗೆ ವಾರ್ಷಿಕ ಜಾತ್ರೆ ಮತ್ತು ನೂತನ ಬ್ರಹ್ಮರಥ ಸಮರ್ಪಣೆಯು ನಡೆಯಲಿದ್ದು ಪೂರ್ವ ತಯಾರಿ ಬಗ್ಗೆ ಸಭೆಯು ಡಿ.31 ರಂದು ದೇವಸ್ಥಾನದಲ್ಲಿ ನಡೆಯಿತು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ವ್ಯ.ಸ.ಸದಸ್ಯ ನಾರಾಯಣ ಕೊಂಡೆಪ್ಪಾಡಿ, ದೇವಸ್ಥಾನದ ಕಚೇರಿ ವ್ಯವಸ್ಥಾಪಕ ವಸಂತ ಆಚಾರ್ಯ ಉಪಸ್ಥಿತರಿದ್ದರು.

ಜಾತ್ರೋತ್ಸವ ಯಶಸ್ವಿಯಾಗಿ ನಡೆಯಲು ಸಂಘಸಂಸ್ಥೆಗಳ ವಿವಿಧ ಸಮಿತಿಗಳನ್ನು ರಚಿಸಲಾಯಿತು. ಪದಾಧಿಕಾರಿಗಳಿಗೆ ವಿವಿಧ ಜಾವಾಬ್ದಾರಿಗಳನ್ನು ನೀಡಲಾಯಿತು.
ರಥ ಸಮರ್ಪಣೆ ದಿನ ಸಾವಿರಾರು ಜನ ಭಕ್ತಾದಿಗಳು ಆಗಮಿಸಲಿದ್ದು ಭಕ್ತಾದಿಗಳಿಗೆ ಅನುಕೂಲವಾಗುವಂತೆ ವಾಹನ ಪಾರ್ಕಿಂಗ್ ವ್ಯವಸ್ಥೆ,ದೇವಸ್ಥಾನದ ಸೇವಾ ಕೌಂಟರ್,ಭೋಜನದ ವ್ಯವಸ್ಥೆ ಹಾಗೂ ಇನ್ನಿತರ ವ್ಯವಸ್ಥೆಗಳ ಬಗ್ಗೆ ಚರ್ಚೆಗಳು ನಡೆಯಿತು. ಸುನಿಲ್ ರೈ ಪೆರುವಾಜೆ,ಪ್ರೀತಂ ರೈ,ರಾಮ ಪೆರುವಾಜೆ,ಕುಶಾಲಪ್ಪ ಪೆರುವಾಜೆ ಹಾಗೂ ಸಂಸ್ಥೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದು ಸಲಹೆಗಳನ್ನು ನೀಡಿದರು.