ಸುಬ್ರಹ್ಮಣ್ಯದಲ್ಲಿ ಕೇನ್ಯ ಗಿರಿನಾಥ ಶೆಟ್ಟಿ ಮತ್ತು ಕೇನ್ಯ ರವೀಂದ್ರನಾಥ ಶೆಟ್ಟಿ ದಂಪತಿಗಳ ವೈವಾಹಿಕ ಸುವರ್ಣ ಮಹೋತ್ಸವ ಶುಭಾಶಂಸನಾ ಕಾರ್ಯಕ್ರಮ

0

ಸುಬ್ರಹ್ಮಣ್ಯದಲ್ಲಿ ಕೇನ್ಯ ಗಿರಿನಾಥ ಶೆಟ್ಟಿ ಮತ್ತು ಕೇನ್ಯ ರವೀಂದ್ರನಾಥ ಶೆಟ್ಟಿ ದಂಪತಿಗಳ ವೈವಾಹಿಕ ಸುವರ್ಣ ಮಹೋತ್ಸವ ಶುಭಾಶಂಸನಾ ಕಾರ್ಯಕ್ರಮ

ಕೇನ್ಯ ಗಿರಿನಾಥ ಶೆಟ್ಟಿ ಮತ್ತು ಶ್ರೀಮತಿ ಮನಮೋಹಿನಿ ಗಿರಿನಾಥ ಶೆಟ್ಟಿ ಹಾಗೂ ಕೇನ್ಯ ರವೀಂದ್ರನಾಥ ಶೆಟ್ಟಿ ಮತ್ತು ಶ್ರೀಮತಿ ನಿರಂಜಿನಿ ರವೀಂದ್ರನಾಥ ಶೆಟ್ಟಿ ದಂಪತಿಗಳ ವೈವಾಹಿಕ ಜೀವನದ ಸುವರ್ಣ ಮಹೋತ್ಸವ ಸಂಭ್ರಮದ ಅಂಗವಾಗಿ ಶುಭಾಶಂಸನಾ ಕಾರ್ಯಕ್ರಮ ಜ. 6ರಂದು ಸುಬ್ರಹ್ಮಣ್ಯದ ವಲ್ಲೀಶ ಸಭಾಭವನದಲ್ಲಿ ನಡೆಯಿತು. ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಅಪ್ಪಣ್ಣ ಹೆಗ್ಡೆ ಸಭಾ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ರಮಾನಾಥ ರೈ ಸನ್ಮಾನ ಕಾರ್ಯಕ್ರಮ ನೆರವೇರಿಸಿದರು. ಸುಳ್ಯ ಶಾಸಕಿ ಕು. ಭಾಗೀರಥಿ ಮುರುಳ್ಯ, ಪುತ್ತೂರು ಮಾಜಿ ಶಾಸಕಿ ಶ್ರೀಮತಿ ಶಕುಂತಲಾ ಟಿ. ಶೆಟ್ಟಿ, ಸುಬ್ರಹ್ಮಣ್ಯದ ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಎನ್. ಕೇಶವ ಭಟ್, ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಸಂಚಾಲಕರಾದ ಸವಣೂರು ಕೆ. ಸೀತಾರಾಮ ರೈ, ಸಾಮಾಜಿಕ ಕಾರ್ಯಕರ್ತ ಎಂ.ಬಿ. ಸದಾಶಿವ, ರಾಜ್ಯ ಧಾರ್ಮಿಕ ಪರಿಷತ್ತು ಸದಸ್ಯೆ ಮಲ್ಲಿಕಾ ಪಕಳ ಅತಿಥಿಗಳಾಗಿ ಭಾಗವಹಿಸಿದ್ದರು.

ಕರ್ನಾಟಕ ಮಾದ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಪರ್ತಕರ್ತ ಪಿ.ಬಿ. ಹರೀಶ್ ರೈ‌ ಮತ್ತು ಸಿವಿಲ್ ಇಂಜಿನಿಯರ್ ಮಾರ್ಕೋಡ್ ಸುಧೀರ್ ಕುಮಾರಿ ಶೆಟ್ಟಿ ಕೋಟೇಶ್ವರ ಇವರಿಗೆ ಗೌರವ ಸನ್ಮಾನ ನಡೆಯಿತು. ಶ್ರೀ ಸುಬ್ರಹ್ಮಣ್ಯೇಶ್ವರ ಪ.ಪೂ. ಕಾಲೇಜಿನ ಉಪನ್ಯಾಸಕರಾದ ಯಶವಂತ ರೈ ಸನ್ಮಾನ ಪತ್ರ ವಾಚಿಸಿದರು. ಶ್ರೀಮತಿ ಭವ್ಯಶ್ರೀ ಕುಲ್ಕುಂದ ಪ್ರಾರ್ಥಿಸಿದರು. ಎಂ.ಬಿ. ಸದಾಶಿವ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೇನ್ಯ ರಂಜಿತ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಚನಿಲ ತಿಮ್ಮಪ್ಪ ಶೆಟ್ಟಿ ವಂದಿಸಿದರು.
ಪ್ರದೀಪ್ ಕುಮಾರ್ ರೈ ಪನ್ನೆ ಕಾರ್ಯಕ್ರಮ ನಿರೂಪಿಸಿದರು. ಕೇನ್ಯ ಕುಟುಂಬಸ್ಥರು, ಅಭಿಮಾನಿಗಳು ಸಭೆಯಲ್ಲಿ ಆಗಮಿಸಿ ಶುಭ ಹಾರೈಸಿದರು.


ಸಭಾಕಾರ್ಯಕ್ರಮದ ಬಳಿಕ ಮಧ್ಯಾಹ್ನ ಸಹಭೋಜನ ನಡೆಯಿತು. ಪ್ರಾತಃಕಾಲ ಕೇನ್ಯ ಕಿರಣ ನಿಲಯದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕ ವೇ.ಮೂ. ರಾಜೇಶ್ ಅಸ್ರಣ್ಣರ ನೇತೃತ್ವದಲ್ಲಿ ಮೃತ್ಯುಂಜಯ ಹೋಮ ನಡೆಯಿತು.