ಚೆಂಬು ಕಿನುಮಣಿ ದೈವಸ್ಥಾನದ ನಾಗನ ಕಟ್ಟೆಯ ಬಳಿ ತಡೆಗೋಡೆ ನಿರ್ಮಾಣಕ್ಕೆ ಶಾಸಕ ಪೊನ್ನಣ್ಣ ಅವರಿಂದ ಗುದ್ದಲಿಪೂಜೆ

0

50 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣ

ಚೆಂಬು ಗ್ರಾಮದ ಕಿನುಮಣಿ ದೈವಸ್ಥಾನದ ನಾಗನ ಕಟ್ಟೆಯ ಹೊಳೆ ಬದಿಗೆ 50 ಲಕ್ಷ ರೂ. ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ತಡೆಗೋಡೆಗೆ ಮುಖ್ಯಮಂತ್ರಿಗಳ ಕಾನೂನೂ ಸಲಹೆಗಾರ ಹಾಗೂ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಎ. ಎಸ್. ಪೊನ್ನಣ್ಣ ಅವರು ಫೆ.9ರಂದು ಗುದ್ದಲಿಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಶಾಸಕರು ಗ್ರಾಮಸ್ಥರ ಸಮಸ್ಯೆಗಳನ್ನು ಕೇಳಿಕೊಂಡರು. ಕೊಡಗು ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಧರ್ಮಜ ಉತ್ತಪ್ಪ, ವಲಯ ಅಧ್ಯಕ್ಷ ಪಿ. ಎಲ್. ಸುರೇಶ್, ನಾಪೋಕ್ಲು ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್, ಮಡಿಕೇರಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕುಮಾರಸ್ವಾಮಿ ಆರ್.ಎನ್, ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೊಲ್ಯದ ಗಿರೀಶ್, ಚೆಂಬು ಗ್ರಾ.ಪಂ. ಅಧ್ಯಕ್ಷ ತೀರ್ಥರಾಮ ಪೂಜಾರಿಗದ್ದೆ, ನೆರಿನ್ ಕಾರ್ಯಪ್ಪ, ರವಿರಾಜ್ ಹೊಸೂರು, ಎಸ್. ಪಿ. ಹನೀಫ್, ರಿತಿನ್ ಡೆಮ್ಮಾಲೆ, ಸೋಶಿಯಲ್ ಮೀಡಿಯಾ ಪ್ರಮುಖರಾದ ಸೂರಜ್ ಹೊಸೂರು , ವಿನಿಲ್ ಸೋಮಣ್ಣ, ಸಂತೋಷ್ ಕುಮಾರ್ ಚಡಾವು ಪಕ್ಷದ ಪ್ರಮುಖರು, ಪಕ್ಷದ ಮುಖಂಡರು, ಮತ್ತು ಊರಿನವರು ಉಪಸ್ಥಿತರಿದ್ದರು.