ವಿನೋಬನಗರ ವಿವೇಕಾನಂದ ವಿದ್ಯಾ ಸಂಸ್ಥೆಯಲ್ಲಿ ವಿಜ್ಞಾನ ದಿನಾಚರಣೆ

0

ವಿನೋಬನಗರದ ವಿವೇಕಾನಂದ ವಿದ್ಯಾ ಸಂಸ್ಥೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಪ್ರಯುಕ್ತ ಫೆ. 28ರಂದು ಸಂಸ್ಥೆಯ ಲೋಹಿತ್ ಎಸ್ ಎಂಬ ವಿದ್ಯಾರ್ಥಿಯಿಂದ ಏಳು ಬಣ್ಣ ಸೇರಿ ಬಿಳಿ ಬಣ್ಣ ವಾಗುವ ಬೆಳಕಿನ ವರ್ಣ ವಿಭಜನೆಯ ಮಾದರಿಯೊಂದಿಗೆ ಉದ್ಘಾಟನೆ ಮಾಡಲಾಯಿತು. ತದನಂತರ ವಿದ್ಯಾರ್ಥಿನಿಯರಿಂದಕಾಡು ಬೆಳೆಸಿ ನಾಡು ಉಳಿಸಿ ಎಂಬ ದರಿತ್ರಿ ಸ್ವರ್ಗ ಸಮಾನಂ ಎಂಬ ನೃತ್ಯ ನಡೆಯಿತು. ಆದ್ಯ ಕೆ ಇವರು ಸರ್ ಸಿ.ವಿ ರಾಮನ್ ಅವರ ಪರಿಚಯವನ್ನು ತಿಳಿಸಿಕೊಟ್ಟರು. ನೀರು ಆವಿಯಾಗಿ ಮೋಡ, ಮಳೆ ಹನಿಯಾಗಿ ಭೂಮಿಗೆ ಬೀಳುವ ಜಲಚಕ್ರ ಹಾಡನ್ನು ವಿದ್ಯಾರ್ಥಿ/ವಿದ್ಯಾರ್ಥಿನಿಯರು ಹಾಡಿದರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು. ಕಾರ್ಯಕ್ರಮವನ್ನು ರಾಶಿ ಬಿ. ನಿರೂಪಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ವೃಂದದವರು ಉಪಸ್ಥಿತರಿದ್ದರು.