ಗಾಂಧಿನಗರ : ಬಾಯಿ ತೆರೆದು ನಿಂತಿರುವ ಸುಳ್ಯ ಮುಖ್ಯರಸ್ತೆಯ ಚರಂಡಿ

0

ಗಾಂಧಿನಗರದ ಯೂನಿಯನ್ ಬ್ಯಾಂಕ್ ಬಳಿ ಮುಖ್ಯರಸ್ತೆಯ ಒಳಚರಂಡಿಯ ಸ್ಲಾಬ್ ಗಳು ಜಾರಿ ಚರಂಡಿಯೊಳಗೆ ಬಿದ್ದು ಅಪಾಯವನ್ನು ಆಹ್ವಾನಿಸುತ್ತಿದೆ.

ಘಟನೆ ನಡೆದು ಇಂದಿಗೆ ಹತ್ತು ದಿನಗಳೆ ಕಳೆದರೂ ಸಂಬಂಧಪಟ್ಟವರು ಯಾರು ಇತ್ತ ಗಮನಹರಿಸುವುದಿಲ್ಲ ಎಂದು ಸ್ಥಳೀಯರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.

ಅಲ್ಲದೆ ಇದರಿಂದಾಗಿ ಪರಿಸರವಾಸಿಗಳಿಗೆ ಸಹಿಸಲಸಾಧ್ಯವಾದ ಗಬ್ಬು ವಾಸನೆ ಹಾಗೂ ರೋಗ ಹರಡುವ ನೊಣ,ಸೊಳ್ಳೆ, ನಾಯಿಗಳ ಕಾಟಗಳು ಹೆಚ್ಚಾಗುತ್ತಿದ್ದು, ಈ ಭಾಗದಲ್ಲಿ ನಡೆದಾಡುವ ಪಾದಾಚಾರಿಗಳು ಮೂಗು ಮುಚ್ಚಿಕೊಂಡೇ ಸಂಚರಿಸಬೇಕಾದ ಪರಿಸ್ಥಿತಿಯುಂಟಾಗಿದೆ.


ಸುತ್ತಮುತ್ತಲ ಜನರು ಮಾರಕವಾದ ರೋಗಬಾಧಿಸುವ ಭಯದೊಂದಿಗೆ ಜವಾಬ್ದಾರಿ ಹೊತ್ತವರಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಸ್ಪಂದಿಸಬೇಕಾದವರು ಇಲ್ಲಿಯವರೆಗೆ ಈ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.

ತೀರಾ ಅವೈಜ್ಞಾನಿಕ ರೀತಿಯಲ್ಲಿ ಹಾಸುಗಲ್ಲನ್ನು ಅಳವಡಿಸಿರುವ ಕಾರಣ ಈ ಮೊದಲೇ ಹಲವು ಬಾರಿ ಇದೇ ಪರಿಸ್ಥಿತಿಯುಂಟಾಗಿತ್ತು ಈ ಸಮಸ್ಯೆಯ ಬಗ್ಗೆ ಜವಾಬ್ದಾರಿ ವಹಿಸಿಕೊಳ್ಳಬೇಕಾದವರು ಶಾಶ್ವತ ಪರಿಹಾರವನ್ನು ನೀಡಿ ಗಬ್ಬು ವಾಸನೆ ಹಾಗೂ ಅನಾರೋಗ್ಯ ಬಾಧಿಸುವ ಸಂಭವದ ಭಯದಿಂದ ಮುಕ್ತಗೊಳಿಸಿಕೊಡಬೇಕಾಗಿದೆ ಎಂದು ಸ್ಥಳೀಯ ವ್ಯಾಪಾರಸ್ಥರು ಆಗ್ರಹಿಸಿದ್ದಾರೆ.