ಎ.22.ಮತ್ತು ಎ.23: ಪಂಜದ ಅಳ್ಪೆ ಚಿಂಗಾಣಿಗುಡ್ಡೆ ದೈವಸ್ಥಾನದಲ್ಲಿ ವಾರ್ಷಿಕ ತಂಬಿಲ ನೇಮೋತ್ಸವ

0

ಪಂಜದ ಅಳ್ಪೆ ಚಿಂಗಾಣಿಗುಡ್ಡೆ ಶ್ರೀ ಉಳ್ಳಾಕುಲು ಉಳ್ಳಾಲ್ತಿ,ಮಹಿಷಂತಾಯ ಹಾಗೂ ಪರಿವಾರ ದೈವಗಳ ದೈವಸ್ಥಾನ ಇದರ ವಾರ್ಷಿಕ ತಂಬಿಲ ಮತ್ತು ನೇಮೋತ್ಸವ ಎ.22ಮತ್ತು ಎ23ರಂದು ಜರುಗಲಿದೆ.

ಎ.22.ರಂದು ಮುಂಜಾನೆ ಗಂಟೆ 8.30 ರಿಂದ ವಾರ್ಷಿಕ ತಂಬಿಲ, ಸಂಜೆ 6.45 ರಿಂದ ತುಲಾ ಲಗ್ನ ಶುಭ ಮುಹೂರ್ತದಲ್ಲಿ ಭಂಡಾರ ತೆಗೆಯುವುದು, ಭಜನಾ ಕಾರ್ಯಕ್ರಮ, ಅನ್ನಸಂಪರ್ಪಣೆ, ರಾತ್ರಿ ಗಂಟೆ 9ರಿಂದ ಶ್ರೀ ಅರಸು ಉಳ್ಳಾಕುಲು ,ಶ್ರೀ ಮಹಿಷಂತಾಯ, ಶ್ರೀ ಮಣಿಪಾನ ಪಂಜುರ್ಲಿ ದೈವಗಳ ನೇಮ ನಡೆಯಲಿದೆ.

ಎ.23. ರಂದು ಬೆಳಗ್ಗೆ ಗಂಟೆ 5ರಿಂದ ಶ್ರೀ ಉಳ್ಳಾಲ್ತಿ ಅಮ್ಮನವರ ನೇಮ, ಬೆಳಿಗ್ಗೆ ಗಂಟೆ 9 ರಿಂದ ಶ್ರೀ ಉಳ್ಳಾಕುಲು ದೈವದ ನೇಮ. ಅನ್ನ ಸಂತರ್ಪಣೆ ಜರುಗಲಿದೆ.

ಸಂಜೆ ಗಂಟೆ 3 ರಿಂದ ಶ್ರೀ ಕುಪ್ಪೆ ಪಂಜುರ್ಲಿ ದೈವ ಮತ್ತು ಶ್ರೀ ಗುಳಿಗ ದೈವದ ನೇಮ, ರಾತ್ರಿ ಗಂಟೆ 8ರಿಂದ ಪರಿವಾರ ದೈವಗಳ ಮತ್ತು ಶ್ರೀ ಧರ್ಮ ದೈವ ರುದ್ರ ಚಾಮುಂಡಿ ದೈವದ ನೇಮ ಜರುಗಲಿದೆ.
ಏ.22 ರಂದು ವಿವಿಧ ಸ್ಥಳಗಳಲ್ಲಿ ಸಂಗ್ರಹಿಸಿದ ಹಸಿರು ಕಾಣಿಕೆ ದೈವಸ್ಥಾನಕ್ಕೆ ಸಮರ್ಪಣೆ ನಡೆಯಲಿದೆ.