ಜಾಲ್ಸೂರು: ಕದಿಕಡ್ಕದಲ್ಲಿ ಪ. ಜಾತಿ ಕಾಲನಿ ನಿವಾಸಿಗಳಿಗೆ ಇನ್ನೂ ದೊರಕದ ಹಕ್ಕುಪತ್ರ

0

ಜಾಲ್ಸೂರು ಗ್ರಾಮದ ಕದಿಕಡ್ಕದ ಕಲ್ಲಮುರ ಪರಿಶಿಷ್ಟ ಜಾತಿ ಕಾಲನಿ ನಿವಾಸಿಗಳಿಗೆ ಗ್ರಾಮ ಪಂಚಾಯತಿ ಹಕ್ಕುಪತ್ರ ನೀಡುವುದಾಗಿ ಭರವಸೆ ನೀಡಿದ್ದರೂ, ಇನ್ನೂ ನೀಡದ ಹಿನ್ನೆಲೆಯಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದು, ಕದಿಕಡ್ಕದಲ್ಲಿ ಎ.16ರಂದು ಬೆಳಿಗ್ಗೆ ಚುನಾವಣಾ ಬಹಿಷ್ಕಾರದ ಬ್ಯಾನರ್ ಅಳವಡಿಸಲಾಗಿದೆ.

ಕಳೆದ ಬಾರಿ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಲ್ಲಮುರ ಪರಿಶಿಷ್ಟ ಜಾತಿ ಕಾಲನಿಯ ಸುಮಾರು 13 ಮನೆಗಳಿಗೆ ಹಕ್ಕುಪತ್ರ ನೀಡುವಂತೆ ಕಾಲನಿ ನಿವಾಸಿಗಳು ಜಾಲ್ಸೂರು ಗ್ರಾಮ ಪಂಚಾಯತಿ ಗೆ ಮನವಿ ಮಾಡಿದ್ದರಲ್ಲದೇ, ಚುನಾವಣಾ ಬಹಿಷ್ಕಾರದ ಬ್ಯಾನರ್ ಅಳವಡಿಸಿದ್ದರು. ಆಗ ಗ್ರಾ.ಪಂ. ಹಕ್ಕುಪತ್ರ ನೀಡುವುದಾಗಿ ಭರವಸೆ ನೀಡಿ, ಬಹಿಷ್ಕಾರ ಬ್ಯಾನರ್ ತೆಗೆಸಿದ್ದರು.

ಇದೀಗ ವಿಧಾನಸಭಾ ಚುನಾವಣೆ ಕಳೆದು ಒಂದು ವರ್ಷ ಆಗುತ್ತಾ ಬಂದಿದ್ದು, ಕಾಲನಿ ನಿವಾಸಿಗಳಿಗೆ ಇದುವರೆಗೆ ಹಕ್ಕುಪತ್ರ ದೊರೆತಿಲ್ಲ. ಹಾಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಾವು ಮತದಾನ ಮಾಡುವುದಿಲ್ಲ ಎಂದು ಕಾಲನಿ ನಿವಾಸಿಗಳು ತಿಳಿಸಿದ್ದಾರೆ.