ಕೊಲ್ಲಮೊಗ್ರು: ಸಿಡಿಲಿಗೆ ಹೊತ್ತಿ ಉರಿದ ಮರ

0

ಕೊಲ್ಲಮೊಗ್ರದ ಗಡಿಕಲ್ಲು ಎಂಬಲ್ಲಿ ಮೇ.8 ರ ಸಂಜೆ ಮರವೊಂದಕ್ಕೆ ಸಿಡಿಲು ಬಡಿದು ಮರ ಹೊತ್ತಿ ಉರಿದ ಘಟನೆ ವರದಿಯಾಗಿದೆ.

ಗಡಿಕಲ್ಲು ಶಾಲಾ ಬಳಿ ಒಣಗಿದ ಮರವೊಂದು ಇದ್ದು ಸಂಜೆ ಗಾಳಿ, ಮಳೆ, ಸಿಡಿಲು ಬಂದ ಸಂದರ್ಭದ ಒಣಗಿದ ಮರಕ್ಕೆ ಸಿಡಿಲು ಬಡಿದು ಅದು ಹೊತ್ತಿ ಉರಿಯಿತು. ರಾಜೇಶ್ ಗಡಿಕಲ್ಲು ಎಂಬವರು ಈ ದೃಶ್ಯವನ್ನು ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.