ಕೊಲ್ಲಮೊಗ್ರು:ಗಾಳಿ, ಮಳೆಗೆ ಶಾಲಾ ಅಕ್ಷರ ದಾಸೋಹದ ಕಟ್ಟಡದ ಶೀಟ್ ಗೆ ಹಾನಿ, ಕೃಷಿ ನಾಶ

0

ಕೊಲ್ಲಮೊಗ್ರದಲ್ಲಿ ಮೇ.8 ರ ಸಂಜೆ ಸುರಿದ ಮಳೆ, ಗಾಳಿಗೆ ಸ.ಹಿ.ಪ್ರಾ ಶಾಲೆ ಬಂಗ್ಲೆಗುಡ್ಡೆ ಇದರ ಅಕ್ಷರ ದಾಸೋಹದ ಕಟ್ಟಡದ ಶೀಟ್ ಗೆ ಹಾನಿಯಾಗಿದೆ, ಅಲ್ಲದೆ ಅಲ್ಲಲ್ಲಿ ಕೃಷಿ ಹಾನಿಯಾಗಿದೆ.

ಅಕ್ಷರ ದಾಸೋಹ ಕಟ್ಟಡದ ಎದುರು ಭಾಗದಲ್ಲಿ ಇಳಿಸಿ ಮಾಡಿದ ಶೀಟ್ ನ ಮಾಡು ಗಾಳಿಯ ರಭಸಕ್ಕೆ ಹಾರಿಹೋಗಿ ಶೀಟ್ ಸಂಪೂರ್ಣ ಹುಡಿಯಾಗಿದೆ. ಅಲ್ಲದೆ ರೋಹಿತ್ ದಬ್ಬಡ್ಕ ಎಂಬವರ ತೋಟದಲ್ಲಿ 50 ಕ್ಕೂ ಅಧಿಕ ಅಡಿಕೆ ಮರ ನಾಶವಾಗಿದೆ. ಈ ಭಾಗದ ಹಲವರ ತೋಟದಲ್ಲಿ ಅಲ್ಪಸ್ವಲ್ಪ ಹಾನಿಯಾಗಿರುವುದಾಗಿ ತಿಳಿದು ಬಂದಿದೆ.