ಮರ್ಕಂಜ-ಸುಳ್ಯ ಬಸ್ಸಲ್ಲಿ ರಸ್ಸೋ- ರಶ್
ಶಾಲಾ ವಿದ್ಯಾರ್ಥಿಗಳನ್ನು ಬಿಟ್ಟು ಹೋಗುತ್ತಿರುವ ಸರಕಾರಿ ಬಸ್ಸು
ಮರ್ಕಂಜ ಗ್ರಾಮಕ್ಕೆ ಬರುತ್ತಿರುವ ಸರ್ಕಾರಿ ಬಸ್ ದೊಡ್ಡತೋಟ ಮರ್ಕಂಜ ರಸ್ತೆಯಲ್ಲಿ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳನ್ನು ಬಸ್ಸಿಗೆ ಹತ್ತಿಸಿಕೊಳ್ಳದೆ ಬಿಟ್ಟು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.









ಮರ್ಕಂಜದಲ್ಲಿ ರಾತ್ರಿ ಹೊತ್ತು ನಿಲುಗಡೆ ಆಗುತ್ತಿದ್ದ ಬಸ್ಸನ್ನು ಬೆಳಿಗ್ಗೆ ಮಡಪ್ಪಾಡಿಗೆ ಕಳುಹಿಸಿ ಅಲ್ಲಿಂದ ಮತ್ತೆ ಸೇವಾಜೆ ಗೋಳಿಯಡ್ಕ ಬೊಮ್ಮಾರು ಹೈದಂಗೂರು ದೊಡ್ಡ ತೋಟ ಮಾರ್ಗವಾಗಿ ಸುಳ್ಯಕ್ಕೆ ಸಂಚರಿಸುವ ಅವೈಜ್ಞಾನಿಕ ವ್ಯವಸ್ಥೆ ಮಾಡಿರುವುದಕ್ಕೆ ಮರ್ಕಂಜ ಗ್ರಾಮದ ಪ್ರಯಾಣಿಕರು ವಿರೋಧ ವ್ಯಕ್ತಪಡಿಸಿದ್ದರು .
ಆರಂಭದ ದಿನವೇ ಬೆಳ್ಳಂಬೆಳಗ್ಗೆ ಬಸ್ಸನ್ನು ಮಡಪ್ಪಾಡಿಗೆ ಕಳುಹಿಸದಂತೆ ತಡೆ ಹಿಡಿಯಲಾಗಿತ್ತು .ಆದರೆ ಬಸ್ ಡಿಪೋ ಅಧಿಕಾರಿಗಳು ಸಮಜಾಯಿಷಿ ನೀಡಿ ಮುಂದಿನ ದಿನಗಳಲ್ಲಿ ಮಡಪ್ಪಾಡಿಗೆ ಬೇರೆ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದರು .ಅದರೆ ಇದುವರೆಗೆ ಯಾವುದೇ ವ್ಯವಸ್ಥೆ ಮಾಡದೇ ಮರ್ಕಂಜಕ್ಕೆ ಬರುತ್ತಿರುವ ಬಸ್ಸನ್ನು ಮಡಪ್ಪಾಡಿಗೆ ಕಳುಹಿಸುತ್ತಿರುವ ಕಾರಣ ಮಿತ್ತಡ್ಕ ತಲುಪುವ ವೇಳೆಗೆ ಬಸ್ಸು ರಶ್ ಆಗಿ ಬೊಮ್ಮಾರು ರೆಂಜಾಳ ಹೈದಂಗೂರು ಬೆಟ್ಟ ಚೆನ್ನಡ್ಕ ಭಾಗದ ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಮಾರ್ಗಮಧ್ಯದಲ್ಲಿ ಬಾಕಿ ಆಗುವ ಪರಿಸ್ಥಿತಿ ನಿರ್ಮಾಣವಾಗಿದೆ.. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು .ಶಾಸಕರು ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿ ಬಸ್ಸು ವ್ಯವಸ್ಥೆ ಸರಿಪಡಿಸಬೇಕೆಂದು ವಿಧ್ಯಾರ್ಥಿಗಳು ಹಾಗೂ ಸಾರ್ವಜನಿಕರು ಆಗ್ರಹ ಮಾಡಿದ್ದಾರೆ.










