ನೆಲ್ಲೂರು ಕೆಮ್ರಾಜೆ ಪ್ರಾ.ಕೃ.ಪ.ಸ. ಸಂಘಕ್ಕೆ ಡಿಸಿಸಿ ಬ್ಯಾಂಕಿನಿಂದ ಅತ್ಯುತ್ತಮ ಸಹಕಾರ ಸಂಘ ಪ್ರಶಸ್ತಿ ಲಭಿಸಿದೆ.









ಮಂಗಳೂರಿನಲ್ಲಿ ನಡೆದ ಡಿಸಿಸಿ ಬ್ಯಾಂಕಿನ ಮಹಾಸಭೆಯಲ್ಲಿ ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸಹಕಾರಿ ರತ್ನ ಡಾ. ಎಂ. ಎನ್. ರಾಜೇಂದ್ರ ಕುಮಾರ್ ನೆಲ್ಲೂರು ಕೆಮ್ರಾಜೆ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ವಿಷ್ಣು ಭಟ್ ಮೂಲೆತೋಟ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂತೋಷ್ ಎನ್.ರವರಿಗೆ ಪ್ರಶಸ್ತಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಜಯಪ್ರಸಾದ್ ಸುಳ್ಳಿ, ನಿರ್ದೇಶಕರಾದ ಉಮೇಶ್ ಪ್ರಭು, ದೇವಿಪ್ರಸಾದ್ ಸುಳ್ಳಿ, ವಿನಾಯಚಂದ್ರ ಸುಳ್ಳಿ, ಹರೀಶ್ ಸುಳ್ಳಿ, ಚಂದ್ರ ದಾಸನಕಜೆ, ಇಂದಿರಾ ಎರ್ಮೆಟ್ಟಿ, ಸಂಧ್ಯಾ ಪುನುಕುಟ್ಟಿ, ಸಿಬ್ಬಂದಿ ಜೀವನ್ ಪಿ. ಬಿ., ನವೋದಯ ಪ್ರೇರಕಿ ದೇವಕಿ ಕೇಪಳಕಜೆ ಉಪಸ್ಥಿತರಿದ್ದರು.










