ಇಂದು ದಾಸರಬೈಲು ದಿ| ಚನಿಯ ಭಾಗವತರ ಸಂಸ್ಮರಣೆ, ಸನ್ಮಾನ ಮತ್ತು ತಾಳಮದ್ದಳೆ ಕಾರ್ಯಕ್ರಮ

0

ಚನಿಯ ಭಾಗವತರ ಸಂಸ್ಮರಣಾ ಸಮಿತಿ ಮತ್ತು ಯಕ್ಷಭಿಮಾನಿ ಬಳಗ ಮರ್ಕಂಜದ ವತಿಯಿಂದ ಆಯೋಜನೆ

ಬೊಮ್ಮರು ಶ್ರೀ ಮೂವರ್ ದೈವಸ್ಥಾನದ ಸಭಾಭವನದಲ್ಲಿ ಕಾರ್ಯಕ್ರಮ

ಯಕ್ಷಗಾನ ಕ್ಷೇತ್ರಕ್ಕೆ ತಮ್ಮ ಜೀವನವನ್ನೇ ಸಮರ್ಪಿಸಿ, ಅಮೂಲ್ಯ ಸೇವೆ ಸಲ್ಲಿಸಿ ಮಿಂಚಿ ಮರೆಯಾದ ಮರ್ಕಂಜದ ದಾಸರಬೈಲು ದಿ| ಚನಿಯ ಭಾಗವತರ ಸಂಸ್ಮರಣೆ, ಸನ್ಮಾನ ಮತ್ತು ತಾಳಮದ್ದಳೆ ಕಾರ್ಯಕ್ರಮ ಇಂದು (ಅ.19) ಬೊಮ್ಮಾರು ಶ್ರೀ ಮೂವರ್ ದೈವಸ್ಥಾನದ ಸಭಾಭವನದಲ್ಲಿ ನಡೆಯಲಿದೆ.

ಚನಿಯ ಭಾಗವತರ ಸಂಸ್ಮರಣಾ ಸಮಿತಿ ಮತ್ತು ಯಕ್ಷಭಿಮಾನಿ ಬಳಗ ಮರ್ಕಂಜದ ವತಿಯಿಂದ ನಡೆಯುವ ಈ ಕಾರ್ಯಕ್ರಮದ ಸಭಾ ಕಾರ್ಯಕ್ರಮ ಬೆಳಿಗ್ಗೆ 10 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ದಿ| ಚನಿಯ ಭಾಗವತರ ಸಂಸ್ಮರಣಾ ಸಮಿತಿಯ ಅಧ್ಯಕ್ಷ ರಾಮಕೃಷ್ಣ ರಾವ್ ರೆಂಜಾಳ ಅಧ್ಯಕ್ಷತೆ ವಹಿಸಲಿದ್ದಾರೆ.
ಅನ್ನಪೂರ್ಣೇಶ್ವರಿ ಸಿದ್ದಮಠ ಮರ್ಕಂಜ ಇಲ್ಲಿಯ ರಾಜೇಶ್ ನಾಥ್ ಜೀ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಸಾಹಿತಿ, ಚಿಂತಕ ಚಂದ್ರಶೇಖರ ದಾಮ್ಲೆ ಸಂಸ್ಮರಣಾ ಭಾಷಣ ಮಾಡಲಿದ್ದಾರೆ. ಸಾಹಿತಿ, ಚಿಂತಕ ಪ್ರಭಾಕರ ಶಿಶಿಲ ಅಭಿನಂದನಾ ಭಾಷಣ ಮಾಡಲಿದ್ದಾರೆ. ಶಿಕ್ಷಕರು ಹಾಗೂ ಭಾಗವತರಾದ ಶ್ರೀಮತಿ ಕಲಾವತಿ ಅಟ್ಲುರು ಸನ್ಮಾನ ಸ್ವೀಕರಿಸಲಿದ್ದಾರೆ.

ಅಪರಾಹ್ನ 2 ಗಂಟೆಯಿಂದ ಶಿವಭಕ್ತ ವೀರಮಣಿ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.