ನಿಡ್ವಾಳ ಶ್ರೀ ಮಹಾವಿಷ್ಣು ದೇವಳದ ನೂತನ ಗರ್ಭಗುಡಿಗೆ ಪಾದುಕಾನ್ಯಾಸ

0

ಐವತ್ತೊಕ್ಲು ಗ್ರಾಮದ ಕರಿಕ್ಕಳ ಶ್ರೀ ಮಹಾವಿಷ್ಣು ದೇವಸ್ಥಾನದ ಪುನರ್ ನಿರ್ಮಾಣ ಕಾರ್ಯ ನಡೆಯುತ್ತಿದ್ದು
ಆ ಪ್ರಯುಕ್ತ ನೂತನ ಗರ್ಭಗುಡಿ ನಿರ್ಮಾಣಕ್ಕೆ ಮೇ.12ರಂದು ಬೆಳಿಗ್ಗೆ 9.28ರ ಮಿಥುನ ಲಗ್ನದ ಶುಭ ಮುಹೂರ್ತದಲ್ಲಿ ಬ್ರಹ್ಮ ಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಪಾದುಕಾನ್ಯಾಸ ನಡೆಯಿತು.

ವಾಸ್ತು ಶಿಲ್ಪಿ ಕೃಷ್ಣಪ್ರಸಾದ್ ಮುನಿಯಂಗಳ, ಶಿಲ್ಪಿ ಈಶ್ವರಚಂದ್ರ ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಪ್ರಕಾಶ್ ಕಂಬಳ, ಕಾರ್ಯದರ್ಶಿ ಗುರುಪ್ರಸಾದ ತೋಟ,ಪುನರ್ ನಿರ್ಮಾಣ ಸಮಿತಿ ಅಧ್ಯಕ್ಷ ನೇಮಿರಾಜ ಪಲ್ಲೋಡಿ, ಕಾರ್ಯದರ್ಶಿ ಕುಸುಮಾಧರ ಕರಿಮಜಲು,ಆಡಳಿತ ಮಂಡಳಿ ಸರ್ವ ಸದಸ್ಯರು,ಪುನರ್ ನಿರ್ಮಾಣ ಸಮಿತಿ ಸರ್ವ ಸದಸ್ಯರು,ವಿವಿಧ ಸಮಿತಿಗಳ ಪದಾಧಿಕಾರಿಗಳು
,ಸದಸ್ಯರು, ಭಕ್ತಾದಿಗಳು ಪಾಲ್ಗೊಂಡಿದ್ದರು.


ಮೇ.11 ರಂದು ನಿಂತಿಕಲ್ಲಿನಿಂದ ನಿಡ್ವಾಳದ ವರೆಗೆ ಬೃಹತ್ ವಾಹನ ಮೆರವಣಿಗೆಯೊಂದಿಗೆ ನೂತನ ಗರ್ಭಗುಡಿಗೆ ಶಿಲಾಕಲ್ಲು ಆಗಮನ ನಡೆಯಿತು. ಶ್ರೀ ದೇವಳದಲ್ಲಿ ನಡೆದ
ಅಷ್ಟಮಂಗಲ ಪ್ರಶ್ನೆ ಚಿಂತನೆಯಲ್ಲಿ ಕಂಡು ಬಂದಂತೆ
ಶ್ರೀ ದೇವರ ಪುನರ್ ನಿರ್ಮಾಣ ಕಾರ್ಯ ಆರಂಭ ಗೊಂಡಿದೆ.

ದೋಷಗಳ ಪರಿಹಾರ,ಶ್ರೀ ದೇವರಿಗೆ ಅನುಜ್ಞಾ ಕಲಶ, ಶ್ರೀ ದೇವರ ಬಾಲಾಲಯ ಪ್ರತಿಷ್ಠೆ, ನಾಗ ಶಿಲಾ ಪ್ರತಿಷ್ಠಾ ಕಲಶ ಮೊದಲಾದ ವೈಧಿಕ ,ಧಾರ್ಮಿಕ ಕಾರ್ಯಕ್ರಮಗಳು ನಡೆದಿದೆ.ಶ್ರೀ ದೇವಳವು ಸುಮಾರು ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಪುನರ್ ನಿರ್ಮಾಣ ಕಾರ್ಯ ನಡೆಯಲಿದ್ದು ಭಕ್ತಾದಿಗಳ ತನು ಮನ ಧನ ಸಹಕಾರದಿಂದ
ಪೂರ್ಣ ಗೊಳ್ಳಲಿದೆ.