ಕೋಮು ಭಾವನೆ ಕೆರಳಿಸುವ ಬಿಜೆಪಿ ಸರಕಾರವನ್ನು ಜನರೇ ತೊಲಗಿಸಿದ್ದಾರೆ : ಎಂ.ವಿ.ಜಿ.

0

ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ ಸೋಲುವುದರ ಮೂಲಕ ಬಿಜೆಪಿ ಯ ಭ್ರಷ್ಟ ,ದ್ವೇಷ ,ಕೋಮು ಭಾವನೆ ಕೆರಳಿಸುವ ಹಾಗು ದಬ್ಬಾಳಿಕೆಯ ರಾಜಕಿಯ ಯುಗಕ್ಕೆ ರಾಜ್ಯದ ಮತದಾರರು ಇತಿಶ್ರೀ ಹಾಡಿದ್ದಾರೆ. ಇನ್ನು ಮುಂದೆ ರಾಜ್ಯದಲ್ಲಿ ಎಲ್ಲಾ ಜನರನ್ನು ಪ್ರೀತಿಸುವ ಸರ್ವ ಧರ್ಮವನ್ನು ಗೌರವಿಸುವ ಕಾಂಗ್ರೆಸ್ ಸರಕಾರ ಬರಲಿದೆ. ಜನ ಮೆಚ್ಚು ರೀತಿಯ ಆಡಳಿತ ನೀಡಲಿದೆ ಎಂದು ಸುಳ್ಯ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ಎಂ.ವೆಂಕಪ್ಪ ಗೌಡರು ಹೇಳಿದ್ದಾರೆ.