ಮಳೆ ನಿಂತಾಗ ರಸ್ತೆಯಲ್ಲಿ ಮಣ್ಣು, ಕಸ ಕಲ್ಲುಗಳ ರಾಶಿ
ಜಯನಗರ ಪರಿಸರದ ಮುಖ್ಯ ರಸ್ತೆಯ ಎರಡು ಬದಿಗಳಲ್ಲಿ ಚರಂಡಿಗಳ ಅವ್ಯವಸ್ಥೆಯಿಂದ ಇದ್ದು ಮಳೆಯಿಂದ ಕೊಚ್ಚಿ ಬರುವ ಮಣ್ಣುಗಳು ರಸ್ತೆಯಲ್ಲಿ ತುಂಬಿ ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡಿದೆ.
ಮಳೆಯ ಸಂದರ್ಭ ಮೇಲಿನ ಗುಡ್ಡೆ ಪರಿಸರದಿಂದ ಮಣ್ಣುಗಳು, ಸಣ್ಣ ಪುಟ್ಟ ಕಲ್ಲುಗಳು, ಕಸಗಳು ಕೊಚ್ಚಿ ಬಂದು ರಸ್ತೆಯ ಮಧ್ಯಭಾಗದಲ್ಲಿ ಜಮಾವಣೆಗೊಳ್ಳುವುದರಿಂದ ದ್ವಿಚಕ್ರ ವಾಹನ ಸವಾರರು ಜಾರಿ ಬೀಳುವ ಸಂಭವವಿರುತ್ತದೆ. ಆದ್ದರಿಂದ ಸಂಬಂಧಪಟ್ಟವರು ಕೂಡಲೇ ಇತ್ತ ಗಮನ ಹರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.