ಸುಳ್ಯದಲ್ಲಿಯೂ ಅರುಣ್ ಕುಮಾರ್ ಪುತ್ತಿಲ ಹವಾ!

0

ಡಿಕೆ 2024 ಎಂಪಿ ಎಕೆಪಿ ವಾಟ್ಸಾಪ್ ಗ್ರೂಪ್ ರಚನೆ

೨೦೨೩ನೇ ವಿಧಾನಸಭಾ ಚುನಾವಣೆ ಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎರಡನೇ ಸ್ಥಾನ ಪಡೆದು ರಾಜ್ಯದಲ್ಲೇ ಸಂಚಲನ ಸೃಷ್ಠಿಸಿರುವ ಹಿಂದೂ ಸಂಘಟನೆ ಗಳ ಮುಖಂಡ ಅರುಣ್ ಕುಮಾರ್ ಅವರ ಹವಾ ಸುಳ್ಯ ಕ್ಷೇತ್ರದಲ್ಲಿ ಹರಡಿದೆ.
ಸುಳ್ಯ ಕ್ಷೇತ್ರ ಶಾಸಕಿ ಭಾಗೀರಥಿ ಮುರುಳ್ಯರ ಅಭಿನಂದನಾ ಬ್ಯಾನರ್‌ನಲ್ಲಿ ಅರುಣ್ ಕುಮಾರ್ ಪುತ್ತಿಲರ ಫೋಟೋ ವನ್ನು ಅಭಿಮಾನಿಗಳು ಹಾಕಿದ್ದಾರೆ. ಅಲ್ಲದೆ ಡಿಕೆ ೨೦೨೪ ಎಂಪಿ ಎಕೆಪಿ ಸುಳ್ಯ ವಾಟ್ಸಾಪ್ ಗ್ರೂಪ್ ಕೂಡಾ ರಚನೆಯಾಗಿದ್ದು ಇದಕ್ಕೆ ಸುಳ್ಯ ಕ್ಷೇತ್ರದ ಹಲವು ಮಂದಿ ಸೇರ್ಪಡೆಗೊಂಡಿದ್ದಾರೆ.


ಈ ಬಾರಿಯ ಚುನಾವಣೆಯಲ್ಲಿ ಪುತ್ತೂರಿಗೆ ಪುತ್ತಿಲ' ಎಂಬ ಘೋಷವಾಕ್ಯ ದೊಂದಿಗೆ ಚುನಾವಣ ಕಣವನ್ನು ರಂಗೇರಿಸಿದ್ದ ಅರುಣ್ ಕುಮಾರ್ ಪುತ್ತಿಲ ರವರ ಅಭಿಮಾನಿಗಳು ಇದೀಗಹತ್ತೂರಿಗೆ ಪುತ್ತಿಲ’ ಎಂಬ ಘೋಷಣೆ ಮೊಳಗಿಸಿದ್ದಾರೆ. ೨೦೨೪ ರ ಲೋಕಸಭಾ ಚುನಾವಣೆಯಲ್ಲಿಯೂ ಅರುಣ್ ಕುಮಾರ್ ಪುತ್ತಿಲ ಸ್ಪರ್ಧಿಸಬೇಕು ಎಂದು ಅವರ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಬಿಜೆಪಿಯಲ್ಲಿ ಕಾರ್ಯಕರ್ತರನ್ನು ನಿಕೃಷ್ಟವಾಗಿ ಕಾಣಲಾಗುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗುತ್ತಿದ್ದ ಹಿನ್ನಲೆಯಲ್ಲಿ ಪಕ್ಷದ ನಾಯಕರಿಗೆ ಸಂದೇಶ ತಲುಪಿಸಲು ಅರುಣ್ ಕುಮಾರ್ ಪುತ್ತಿಲ ಅವ ರನ್ನು ಪುತ್ತೂರಿನಲ್ಲಿ ಪಕ್ಷೇತರ ಅಭ್ಯ ರ್ಥಿಯಾಗಿಸಲಾಗಿತ್ತು. ಇಡೀ ಪುತ್ತೂರು ಕ್ಷೇತ್ರದಲ್ಲಿ ಅರುಣ್ ಪುತ್ತಿಲ ಪರ ಅಲೆ ಸೃಷ್ಠಿಯಾಗಿದ್ದು ಅವರು ಗೆಲ್ಲಲಿದ್ದಾರೆ ಎಂದೇ ಹೇಳಲಾಗುತ್ತಿತ್ತು. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಂತರ ಘಟಾನುಘಟಿಗಳೇ ಬಿಜೆಪಿ ಪರ ಪ್ರಚಾರಕ್ಕೆ ಬಂದಿದ್ದರೂ ಅರುಣ್ ಕುಮಾರ್ ಪುತ್ತಿಲರನ್ನು ಮಣಿಸಲು ಸಾಧ್ಯವಾಗಿರಲಿಲ್ಲ.


ಜಿದ್ದಾ ಜಿದ್ದಿನ ಹೋರಾಟದಲ್ಲಿ ಶಾಸಕ ರಾಗಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಆಯ್ಕೆಯಾಗಿದ್ದರೆ, ಅರುಣ್ ಕುಮಾರ್ ಪುತ್ತಿಲ ದ್ವಿತೀಯ ಸ್ಥಾನಿಯಾ ಗಿದ್ದರು. ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು. ಚುನಾವಣೆಯಲ್ಲಿ ಸೋತರೂ ಅರುಣ್ ಕುಮಾರ್ ಪುತ್ತಿಲ ಕಾರ್ಯಕರ್ತರ ದೃಷ್ಠಿಯಲ್ಲಿ ಗೆದ್ದಂತೆಯೇ ಆಗಿದ್ದರು. ಅದೇ ಅಲೆಯನ್ನು ಮುಂದುವರಿಸಿ ಲೋಕಸಭಾ ಚುನಾವಣೆಗೂ ಅರುಣ್ ಕುಮಾರ್ ಪುತ್ತಿಲ ಸ್ಪರ್ಧಿಸಬೇಕು ಎಂದು ಅಭಿಮಾನಿ ಬಳಗ ಒತ್ತಾಯಿಸಿದೆ. ಈಗಾಗಲೇ ಈ ಕುರಿತು ಸಭೆ ನಡೆದಿದೆ. ಮೇ.೧೭ರಂದು ಪುತ್ತೂರಿನಲ್ಲಿ ಅರುಣ್ ಕುಮಾರ್ ಪುತ್ತಿಲ ಬಳಗದ ಸಭೆ ನಡೆದಿದ್ದು, ಮೇ.೨೧ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ಬೃಹತ್ ಸಮಾವೇಶ ನಡೆಯಿತು.

ಅರುಣ್ ಕುಮಾರ್ ಪುತ್ತಿಲ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಒತ್ತಾಯ ಕೆಳಿ ಬರುತ್ತಿದ್ದಂತೆಯೇ ದ.ಕ. ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಲ್ಲಿ ಅರುಣ್ ಪುತ್ತಿಲ ಅಭಿಮಾನಿ ಬಳಗ ಆರಂಭಗೊಂಡಿದೆ. ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿಯೂ ಅರುಣ್ ಕುಮಾರ್ ಪುತ್ತಿಲ ಅಭಿಮಾನಿ ಬಳಗ ಆರಂಭಗೊಂಡಿದೆ. ತಾಲೂಕಿನಲ್ಲಿ ವಾಟ್ಸಾಪ್ ಗ್ರೂಪ್ ರಚನೆಗೊಂಡಿದ್ದು ಈಗಾಗಲೇ ಲೋಕಸಭಾ ಚುನಾವಣೆಯ ಚರ್ಚೆ ಆರಂಭಗೊಂಡಿದೆ. ಪುತ್ತೂರು ತಾಲೂಕಿನ ಮುಂಡೂರು ನಿವಾಸಿಯಾಗಿರುವ ಅರುಣ್ ಕುಮಾರ್ ಪುತ್ತಿಲರವರು ಈ ಹಿಂದೆ ಬಜರಂಗದಳ ಮತ್ತು ಶ್ರೀರಾಮಸೇನೆಯಲ್ಲಿ ಗುರುತಿಸಿಕೊಂಡಿದ್ದರು. ಇತ್ತೀಚೆಗೆ ಹಿಂದು ಜಾಗರಣಾ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಅರುಣ್ ಕುಮಾರ್ ಪುತ್ತಿಲ ಅಭಿಮಾನಿ ಬಳಗದಲ್ಲಿ ಮುಂಚೂಣಿಯಲ್ಲಿ ಇದ್ದಾರೆ. ಅರುಣ್ ಕುಮಾರ್ ಪುತ್ತಿಲರವರು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರೂ ಸುಳ್ಯದ ಹಲವು ಮಂದಿ ಅವರೊಂದಿಗೆ ಕೈ ಜೋಡಿಸಿದ್ದರು.

ಅರುಣ್ ಕುಮಾರ್ ಪುತ್ತಿಲ ಹಿಂದುತ್ವದ ನಾಯಕ. ಅವರಿಗೆ ಈ ಬಾರಿ ಬಿಜೆಪಿ ಪಕ್ಷ ಎಂ.ಎಲ್.ಎ. ಟಿಕೆಟ್ ನಿರಾಕರಿಸಿದ್ದರಿಂದ ಪಕ್ಷೇತರರಾಗಿ ನಿಂತು ಹಿಂದುತ್ವದ ಶಕ್ತಿ ತೋರಿಸಿದ್ದಾರೆ. ಅವರು ಜಿಲ್ಲೆಯ ಎಂ.ಪಿ. ಅಭ್ಯರ್ಥಿ ಆಗಬೇಕೆನ್ನುವುದು ಹಿಂದು ಸಮಾಜದ ಒತ್ತಾಯ. ಆದ್ದರಿಂದ ನಾವೆಲ್ಲರೂ ಅವರ ಅಭಿಮಾನಿಗಳು ವಾಟ್ಸಾಪ್ ಗ್ರೂಪ್ ರಚಿಸಿಕೊಂಡು ಕಾರ್ಯಪ್ರವೃತ್ತರಾಗಿzವೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಕೆಲಸ ಆಗುತ್ತಿದೆ. ಪ್ರಧಾನಿ ಮೋದಿಯವರಿಗೂ ಈ ಕುರಿತು ಪತ್ರ ಬರೆದು ತಿಳಿಸುತ್ತೇವೆ.


ಡಿಕೆ ೨೦೨೪ ಎಂಪಿ ಎಕೆಪಿ ವಾಟ್ಸಾಪ್ ಗ್ರೂಪ್ ಅಡ್ಮಿನ್‌ಅರುಣ್ ಕುಮಾರ್ ಪುತ್ತಿಲ ಹಿಂದುತ್ವದ ನಾಯಕ. ಅವರಿಗೆ ಈ ಬಾರಿ ಬಿಜೆಪಿ ಪಕ್ಷ ಎಂ.ಎಲ್.ಎ. ಟಿಕೆಟ್ ನಿರಾಕರಿಸಿದ್ದರಿಂದ ಪಕ್ಷೇತರರಾಗಿ ನಿಂತು ಹಿಂದುತ್ವದ ಶಕ್ತಿ ತೋರಿಸಿದ್ದಾರೆ. ಅವರು ಜಿಲ್ಲೆಯ ಎಂ.ಪಿ. ಅಭ್ಯರ್ಥಿ ಆಗಬೇಕೆನ್ನುವುದು ಹಿಂದು ಸಮಾಜದ ಒತ್ತಾಯ. ಆದ್ದರಿಂದ ನಾವೆಲ್ಲರೂ ಅವರ ಅಭಿಮಾನಿಗಳು ವಾಟ್ಸಾಪ್ ಗ್ರೂಪ್ ರಚಿಸಿಕೊಂಡು ಕಾರ್ಯಪ್ರವೃತ್ತರಾಗಿzವೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಕೆಲಸ ಆಗುತ್ತಿದೆ. ಪ್ರಧಾನಿ ಮೋದಿಯವರಿಗೂ ಈ ಕುರಿತು ಪತ್ರ ಬರೆದು ತಿಳಿಸುತ್ತೇವೆ.
-ರಾಮ್ ಕುಮಾರ್ ಹೆಬ್ಬಾರ್
ಡಿಕೆ ೨೦೨೪ ಎಂಪಿ ಎಕೆಪಿ ವಾಟ್ಸಾಪ್ ಗ್ರೂಪ್ ಅಡ್ಮಿನ್