ನಾಲ್ಕು ಹೆಸರು ಉಲ್ಲೇಖಿಸಿದ ಹಿನ್ನಲೆಯಲ್ಲಿ ಗೊಂದಲ ಸೃಷ್ಟಿ!
ರಾಜ್ಯದ ಹದಿನಾರನೇ ವಿಧಾನಸಭೆಯ ಮೊಟ್ಟ ಮೊದಲ ವಿಶೇಷ ಅಧಿವೇಶನ ಇಂದಿನಿಂದ ಮೇ.24ರ ವರೆಗೆ ನಡೆಯಲಿದೆ. ಸಾರ್ವತ್ರಿಕ ಚುನಾವಣೆಯ ಬಳಿಕ ವಿಧಾನಸಭೆಗೆ ಆಯ್ಕೆಯಾದ 224 ಜನಪ್ರತಿನಿಧಿಗಳ ಪ್ರಮಾಣವಚನ ಕಾರ್ಯಕ್ರಮ ಅಧಿವೇಶನದಲ್ಲಿ ನಡೆಯಿತು.
ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅಧಿವೇಶನದಲ್ಲಿ ಅಧಿಕಾರ ಪದ ಮತ್ತು ಗೌಪ್ಯತಾ ಪ್ರಮಾಣವಚನ ಸ್ವೀಕರಿಸಿದರು. ಕುಲದೇವರಾದ ಸತ್ಯಸಾರಮಣಿ, ಸತ್ಯ ಪದನಾಜಿ, ಅಮ್ಮನವರು ಹಾಗೂ ಮತದಾರ ಭಾಂದವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಈ ವೇಳೆ ಕೆಲವು ಸದಸ್ಯರು ಹೆಸರುಗಳ ಉಲ್ಲೇಖಿಸಿದಾಗ ಸ್ವಲ್ಪ ಹೊತ್ತು ಗೊಂದಲ ಸೃಷ್ಟಿಯಾಯಿತು. ಸ್ಪೀಕರ್ ಆರ್ ವಿ ದೇಶಪಾಂಡೆ, “ಯಾರೂ ಸಂವಿಧಾನ ಪ್ರಕಾರ ಪ್ರಮಾಣ ವಚನ ತೆಗೆದು ಕೊಳ್ಳುವುದಿಲ್ಲವೋ ಅಲ್ಲಿಗೇ ಸ್ಟಾಪ್ ಮಾಡಿ ಬಿಡಿ, ನಾನು ಆರಂಭದಲ್ಲಿಯೇ ಸಂವಿಧಾನ ಮತ್ತು ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸುವಂತೆ ಹೇಳಿದ್ದೇನೆ” ಎಂದು ಕಾರ್ಯದರ್ಶಿಗೆ ಸೂಚಿಸಿದರು.