ಸುಳ್ಯ ಪರಿವಾರ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯಲ್ಲಿ ಇ-ಸ್ಟ್ಯಾಂಪಿಂಗ್ ಸೇವಾ ಕೇಂದ್ರದ ಉದ್ಘಾಟನೆ

0

ಸುಳ್ಯ ಪರಿವಾರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಇದರ ಸುಳ್ಯ ಶಾಖೆಯಲ್ಲಿ ನೂತನವಾಗಿ ಇ- ಸ್ಟ್ಯಾಂಪಿಂಗ್ ಸೇವಾ ಕೇಂದ್ರದ ಉದ್ಘಾಟನೆಯು ಮೇ.24 ರಂದು ನಡೆಯಿತು.
ಸುಳ್ಯ ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಭವಾನಿ ಶಂಕರ್ ರವರು ದೀಪ ಪ್ರಜ್ವಲಿಸಿ ಉದ್ಘಾಟಿಸಿ ” ಬೆಳೆಯುತ್ತಿರುವ ನಗರದಲ್ಲಿ ಕೋ- ಆಪರೇಟಿವ್ ಸೊಸೈಟಿಯ ಮೂಲಕ ಸಾಮಾನ್ಯರಿಗೆ ಸುಲಲಿತವಾಗಿ ಆರ್ಥಿಕ ಸಮಸ್ಯೆಗೆ ಪೂರಕವಾಗಿ ಸಹಕಾರಿಯಾಗುವುದು. ಇ-ಸ್ಟ್ಯಾಂಪಿಂಗ್ ವ್ಯವಸ್ಥೆಯಿಂದ ಜನಸಾಮಾನ್ಯರಿಗೆ ತುಂಬಾ ಪ್ರಯೋಜನಕಾರಿಯಾಗಲಿದೆ ಎಂದು ಅವರು ಹೇಳಿದರು.


ಮುಖ್ಯ ಅತಿಥಿಗಳಾಗಿ ಸುಳ್ಯ ಯೂನಿಯನ್ ಬ್ಯಾಂಕ್ ಆಪ್ ಇಂಡಿಯಾ ಇದರ ಹಿರಿಯ ಶಾಖಾ ವ್ಯವಸ್ಥಾಪಕ ಅಜಯ್ ಕುಮಾರ್ ಟಿ.ಕೆ ಇ- ಸ್ಟ್ಯಾಂಪಿಂಗ್ ಮೆಷಿನ್ ಗೆ ಚಾಲನೆ ನೀಡಿ ಶುಭ ಹಾರೈಸಿದರು. ಕಾಂಪ್ಲೆಕ್ಸ್ ಮಾಲಕ ಇಂಜಿನಿಯರ್ ಕೃಷ್ಣ ರಾವ್ ನಾವೂರು ಉಪಸ್ಥಿತರಿದ್ದರು.


ಪರಿವಾರ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ ಕೇಂದ್ರ ಕಚೇರಿ ಅಧ್ಯಕ್ಷ ಸಂತೋಷ್ ಕುಮಾರ್ ಎ ಅಧ್ಯಕ್ಷತೆ ವಹಿಸಿದ್ದರು. ಸೊಸೈಟಿಯ ನಿರ್ದೇಶಕರಾದ ರತ್ನಾಕರ ನಾಯ್ಕ್, ಸದಾಶಿವ ನಾಯ್ಕ್, ಸುದೇಶ್ ಕುಮಾರ್ ನಾಯ್ಕ್, ಸತೀಶ್ ನಾಯ್ಕ್,ಗೋಪಾಲ ನಾಯ್ಕ್, ಸುಳ್ಯ ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ಸತ್ಯಕುಮಾರ್ ಆಡಿಂಜ, ಸದಸ್ಯರಾದ ವಿಠಲ ನಾಯ್ಕ್ ದೋಣಿಮೂಲೆ, ಸತೀಶ್ ಅಡ್ಕಾರ್, ನವೀನ್ ಕೇರ್ಪಳ, ಗಣೇಶ್ ನಾಯ್ಕ್ ಪೈಚಾರು, ಶಾಂತರಾಮ ನಾಯ್ಕ್ ಎಲಿಕ್ಕಳ, ಶ್ರೀಮತಿ ವಾಣಿ ದೋಣಿಮೂಲೆ, ಶ್ರೀಮತಿ ಸರೋಜಿನಿ ಎಲಿಕ್ಕಳ ಉಪಸ್ಥಿತರಿದ್ದರು.


ಸಲಹಾ ಸಮಿತಿ ಕಾರ್ಯದರ್ಶಿ ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿಸ್ವಾಗತಿಸಿದರು. ಕೇಂದ್ರ ಕಚೇರಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುಧಾಕರ್ ಕೆ.ಪಿ ವಂದಿಸಿದರು.
ಸುಳ್ಯ ಶಾಖೆಯ ಮ್ಯಾನೇಜರ್ ಪ್ರೀತಮ್ ಹಾಗೂ ಸಿಬ್ಬಂದಿಗಳಾದ ಶ್ರೀಮತಿ ತನುಜಾ, ನಂದನ್ ,ಶ್ರೀಮತಿ ಗೀತಾ ಗೂಡಿಂಜ ರವರು ಸಹಕರಿಸಿದರು.